ಅಭಿಪ್ರಾಯ / ಸಲಹೆಗಳು

ಪ್ರಸ್ತಾವನೆ

ಪ್ರಸ್ತಾವನೆ
       

ರಾಜ್ಯದ ಶಾಸನ ಸಭೆಯ ವತಿಯಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆಯ ಅಡಿಯಲ್ಲಿ 10.09.1964 ರಲ್ಲಿ ಸ್ಥಾಪಿತವಾದ "ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ" ಒಂದು ಸ್ವಾಯತ್ತ ಸಂಸ್ಥೆ. ಬೆಂಗಳೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮತ್ತು ಕೊಳಚೆಯ ವಿಲೇವಾರಿ ಅದರ ಪ್ರಥಮ ಕರ್ತವ್ಯಗಳು ಅದು ಭಾರತದಲ್ಲಿ ನೀರು ಸರಬರಾಜು ಮತ್ತು ಕೊಳಚೆ ನಿಲೇವಾರಿ ಸೇವೆಗಳಿಗೆಂದು  ಸ್ಥಾಪಿತವಾದ ಮೊದಲ ಸಾಲಿನ ಮಂಡಳಿಗಳಲ್ಲಿ ಒಂದು.

 

 ಬೃಹತ್ ಬೆಂಗಳೂರು ಮಹಾಪಾಲಿಕೆಯ ಒಟ್ಟಾರೆ 800 ಚ.ಕಿ.ಮೀನ ವಿಸ್ತೃತ ಪ್ರದೇಶ ಜಲಂಡಳಿಯ ವ್ಯಾಪ್ತಿಗೊಳಪಟ್ಟಿದೆ. ಇದರಲ್ಲಿ ಕೇಂದ್ರ ಬೆಂಗಳೂರಿನ 245 ಚ.ಕಿ.ಮೀ 330 ಚ.ಕಿ.ಮೀ ವ್ಯಾಪ್ತಿಯ 8 ನಗರ ಸ್ಥಳೀಯ ಸಂಸ್ಥೆಗಳು 7 ಮುನಿಸಿಪಲ್ ಕಾರ್ಪೋರೇಷನುಗಳು, 1 ಪಟ್ಟಣ ಪಂಚಾಯ್ತಿ ಹಾಗೂ 10 ಗ್ರಾಮಗಳ ಒಟ್ಟಾರೆ 225 ಚ.ಕಿ.ಮೀ ವಿಸ್ತಿರ್ಣ ಸೇರಿದೆ.

 

ಜಲಮಂಡಳಿಯ ಆಡಳಿತ ವ್ಯಾಪ್ತಿಯ ಪ್ರದೇಶ

 

ಜಲಮಂಡಳಿಯ ಜವಾಬ್ದಾರಿಗಳು ಈ ರೀತಿಯಿದೆ.

  • ಬೇಡಿಕೆ ಗನುಸಾರವಾಗಿ ಸಾಕಷ್ಟು ನೀರು ಪೂರೈಕೆ.
  • ಕೊಳಚೆ ವಿಲೇವಾರಿಗಾಗಿ ವ್ಯವಸ್ಥಿತ ಜಾಲದ ನಿರ್ಮಾಣ
  • ಕೊಳಚೆಯ ಸುರಕ್ಷಿತ ವಿಲೇವಾರಿ.
  • ನೀರು ಸರಬರಾಜಿನ ಗಾತ್ರವನ್ನು ಹೆಚ್ಚಿಸುವ ಸಲುವಾಗಿ ಯೋಜನೆಗಳ ತಯಾರಿ, ಅವುಗಳ ಅನುಷ್ಠಾನ.
  • ಲಾಭವು ಇಲ್ಲದ ನಷ್ಟವು ಇಲ್ಲದ ಆಧಾರದ ಮೇಲೆ ತನ್ನ ಸೇವೆಗಳಿಗಾಗಿ ಶುಲ್ಕ ವಿಧಿಸುವುದು ಮತ್ತು
  • ಈ ವ್ಯವಸ್ಥೆಯನ್ನು ಚಿರಂತನವಾಗಿಸುವತ್ತ ಶ್ರಮಿಸುವುದು.

 

ಸಂರಚನೆಗೊಂಡು ಸ್ಥಾಪಿತವಾದ ದಿನದಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನೀರು ಸರಬರಾಜು ಮತ್ತು ಕೊಳಚೆ ವಿಲೇವಾರಿ ಕುರಿತು ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸುತ್ತ ಬಂದಿದೆ. ಇವುಗಳಲ್ಲಿ ಅತ್ಯಂತ ಪ್ರಮುಖವಾದದ್ದೆಂದರೆ ಕಾವೇರಿ ನೀರು ಸರಬರಾಜು ಯೋಜನೆ (ಕಾವೇರಿ ನೀರು ಸರಬರಾಜು ಯೋಜನೆ ಹಂತ I, II, III ಮತ್ತು IV ನಾಲ್ಕರ ಘಟ್ಟ 1 ಮತ್ತು 2),  ಕೋಳಚೆ ವಿಲೇವಾರಿಯ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ, ಅಶುದ್ಧ ನೀರನ್ನು ಸಂಗ್ರಹಿಸಿ ಸಂಸ್ಕರಿಸಿ, ಸಾಗಿಸುವ ಅನೇಕ 'ಯೋಜನೆಗಳನ್ನು ಕೈಗೆತ್ತಿಕೊಂಡು ಕಾರ್ಯಗತಗೊಳಿಸಿದೆ. ಪ್ರಸ್ತುತ ಇರುವ ಒಳಚರಂಡಿ ವ್ಯವಸ್ಥೆಯು 265 ಚ.ಕಿ.ಮೀ ವ್ಯಾಪ್ತಿಯನ್ನು ಒಳಗೊಂಡಿದ್ದು, ಹೊಸದಾಗಿ 3 ಸಂಸ್ಕರಣಾ ಘಟಕಗಳನ್ನು 'ವೃಷಭಾವತಿ ಕಣಿವೆ', 'ಕೋರಮಂಗಲ ಚಲ್ಲಘಟ್ಟ ಕಣಿವೆ' ಹಾಗೂ 'ಹೆಬ್ಬಾಳ' ಕಣಿವೆಗಳಲ್ಲಿ ನಿರ್ಮಿಸಲಾಗಿದೆ. ಹೊಸದಾಗಿ ಸೇರ್ಪಡೆಗೊಂಡ ನಗರ ಪಾಲಿಕೆಗಳಲ್ಲಿ ಒಳಚರಂಡಿ ವ್ಯವಸ್ಥೆಯ ಕಾಮಗಾರಿಗಳು ಪೂರ್ಣವಾಗುತ್ತ ನಡೆದಿದೆ.

 

ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯ ಪಕ್ಷಿನೋಟ

 

ಕರ್ನಾಟಕದ ರಾಜಧಾನಿಯಾಗಿರುವ ಬೆಂಗಳೂರು ಇಡೀ ದೇಶದಲ್ಲಿಯೇ 3ನೇಯ ಅತಿದೊಡ್ಡ ನಗರ ಮತ್ತು 5ನೇಯ ದೊಡ್ಡ ಮೆಟ್ರೋಪಾಲಿಟನ್ ಪ್ರದೇಶ. ಅದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೆಟ್ರೋಪಾಲಿಟನ್ ನಗರ ಕೂಡ. ಶಿಕ್ಷಣ ಕೇಂದ್ರವಾಗಿ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ನೆಲೆಯಾಗಿ ಅನೇಕ ಬಹುರಾಷ್ಟ್ರೀಯ ಕಂಪನಿಗಳ ತವರಾಗಿ, ಅತ್ಯಾಧುನಿಕ ಆರೋಗ್ಯ ಸೇವಾ ಕೇಂದ್ರವಾಗಿರುವ ಬೆಂಗಳೂರು ಪ್ರತಿದಿನವೂ ಹೆಚ್ಚು ಜನರನ್ನು ತನ್ನೆಡೆಗೆ ಸೆಳೆಯುತ್ತಲೇ ಇದೆ. 2011 ರ ಜನಗಣತಿಯಂತೆ ಬೆಂಗಳೂರಿನ ಜನಸಂಖ್ಯೆ 85 ಲಕ್ಷ. ಇಷ್ಟು ಮಹತ್ವದ 800 ಚ.ಕಿ.ಮೀ ವ್ಯಾಪ್ತಿಯ ಬೆಂಗಳೂರಿಗೆ, ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸುತ್ತಿರುವ ಮಹತ್ವದ ಸಂಸ್ಥೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ.

 

 

ಕಾವೇರಿ ನದಿಯಿಂದ ಬೆಂಗಳೂರು ನಗರದ ಕುಡಿಯುವ ನೀರು ಪೂರೈಕೆಗಾಗಿ 19 ಟಿಎಂಸಿಗಳಷ್ಟು ಪ್ರಮಾಣದ ನೀರನ್ನು ಬಳಸಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ. ಕಾವೇರಿ ನೀರು ಸರಬರಾಜು  ಯೋಜನೆಯ ನಾಲ್ಕನೇ ಘಟ್ಟದ 1 ಮತ್ತು 2ನೇ ಹಂತಗಳನ್ನು ಪೂರ್ಣಗೊಳಿಸಿದ ನಂತರ ಸರ್ಕಾರವು ನೀಡಿದ್ದ ನೀರಿನ ಪ್ರಮಾಣ ಪೂರ್ಣಗೊಂಡಿತ್ತು. ಪ್ರಸ್ತುತ ಬೆಂಗಳೂರು ಜಲಮಂಡಳಿಯು ಕಾವೇರಿ ನೀರು ಸರಬರಾಜು ಯೋಜನೆಯ ಮೂಲಕ ಸ್ವಾಷಿತ ಸಾಮರ್ಥ್ಯವಾದ 1440 ಎಂಎಲ್‌ಡಿ ಯಷ್ಟು ನೀರನ್ನು ನಗರಕ್ಕೆ ಪೂರೈಸುತ್ತಿದೆ.

 

ಬೆಂಗಳೂರಿನ 7 ನಗರ ಸಭೆಗಳನ್ನು ಒಳಗೊಂಡಂತೆ ಆದರೆ 225 ಚ.ಕಿ.ಮೀ ಪ್ರದೇಶದ 110 ಹಳ್ಳಿಗಳನ್ನು ಹೊರತುಪಡಿಸಿ ಒಟ್ಟಾರೆ 575 ಚ.ಕಿ.ಮೀ ಪ್ರದೇಶಕ್ಕೆ ನೀರು ಪೂರೈಸುತ್ತಿದೆ. ಕಾವೇರಿ ನೀರು ಸರಬರಾಜು ಯೋಜನೆಯ 4ನೇ ಘಟ್ಟ 2ನೇ ಹಂತವನ್ನು ಪೂರ್ಣಗೊಳಿಸಿದ ನಂತರವೂ ಹೊಸದಾಗಿ ಬಿಬಿಎಂಪಿಯ ವ್ಯಾಪ್ತಿಗೆ ಸೇರಿಸಲ್ಪಟ್ಟ 110 ಹಳ್ಳಿಗಳಿಗೆ ನೀರು ಪೂರೈಸಲು ಜಲಮಂಡಳಿಗೆ ಕಷ್ಟವಾಗುತ್ತಿದೆ.

 

ಈಗ ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು ಬೆಂಗಳೂರು ನಗರಕ್ಕೆ ಹೆಚ್ಚುವರಿಯಾಗಿ 10 ಟಿಎಂಸಿ 775 ಮಿಲಿಯನ್ ಲೀಟರ್ ಪ್ರತಿದಿನ) ನಷ್ಟು ನೀರನ್ನು ಮಂಜೂರು ಮಾಡಿದೆ. ಇದರಿಂದಾಗಿ ಪ್ರಸ್ತುತ ಬೆಂಗಳೂರು ನಗರಕ್ಕೆ ಕಾವೇರಿ ನೀರು ಸರಬರಾಜು ಯೋಜನೆಯ 5ನೇ ಘಟ್ಟವನ್ನು ನಿಯೋಜಿಸಿ ಕಾರ್ಯಗತಗೊಳಿಸಬೇಕದ ಅವಶ್ಯಕತೆ ಇದೆ. ಇದಕ್ಕಾಗಿ ವಿವರವಾದ ಯೋಜನಾವರದಿ (ಡೀಟೆಲ್ಸ್ ಪ್ರಾಜೆಕ್ಟ್ ರಿಪೋರ್ಟ್) ತಯಾರಿಸಿ ಜಪಾನ್ ಇಂಟರ್ ನ್ಯಾಷನಲ್ ಕೋ-ಆಪರೇಷನ್ ಏಜೆನ್ಸಿ (JICA) ಯಿಂದ ಆರ್ಥಿಕ ನೆರವು ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಂತ್ರಿಕ ಅಂಶಗಳು ಮತ್ತು ನೀರಿನ ಬೇಡಿಕೆಯನ್ನು ಪರಿಗಣಿಸಿ ಕಾವೇರಿ ನೀರು ಸರಬರಾಜು ಯೋಜನೆಯ 5ನೇ ಘಟ್ಟವನ್ನು 2 ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು. ಮೊದಲಹಂತದಲ್ಲಿ 500 ಎಂಎಲ್‌ಡಿ(6.45 ಟಿಎಂಸಿ)ಹಾಗೂ ಎರಡನೆ ಹಂತದಲ್ಲಿ 275 ಎಂಎಲ್ (3.55 ಟಿಎಂಸಿ) ನೀರು ಪೂರೈಸಲು ಯೋಜಿಸಲಾಗಿದೆ.

 

ನೀರು ಸರಬರಾಜು ಹಿಂದೇನಿತ್ತು? .........ಈಗ ಹೇಗಿದೆ?

 


        1896 ನೇ ಇಸವಿಯವರೆಗೆ ಬೆಂಗಳೂರಿನ ನೀರಿನ ಅಗತ್ಯವನ್ನು ಧರ್ಮಾಂಬುಧಿ, ಸಂಪಂಗಿ, ಹಲಸೂರು, ಸ್ಯಾಂಕಿ ಕೆರೆಗಳಂತಹ ಕೆರೆಗಳು ಪೂರೈಸುತ್ತಿದ್ದವು. ಇವಕ್ಕೆ ಪೂರಕವಾಗಿ ಸ್ಥಳೀಯ ಬಾವಿ ಮತ್ತು ಕಲ್ಯಾಣಿಗಳಂತಹ ಜಲಮೂಲಗಳೂ ಇದ್ದವು. ಈ ಮೂಲಗಳಿಂದ ದೊರೆಯುತ್ತಿದ್ದ ನೀರು ಬೆಂಗಳೂರಿನ ಆಗತ್ಯ ಪೂರೈಸಲು ಸಾಲದ್ದರಿಂದ ಹೊಸ ಜಲಸಂಪನ್ಮೂಲದ ಹುಡುಕಾಟ ಆರಂಭವಾಯಿತು. ನಗರದ ಬಳಿಯಿದ್ದ ಆರ್ಕಾವತಿನದಿ ಜಲ ಮೂಲವಾಗಬಹುದೆಂದು ತಿಳಿದು ಇಲ್ಲಿಂದ ನಗರಕ್ಕೆ ಸೋಸಿದ ನೀರು ಪೂರೈಸುವ ಕೆಲಸ 1896 ನೇ ವರ್ಷದಲ್ಲಿ ಪ್ರಾರಂಭವಾಯಿತು. ಬೆಂಗಳೂರಿನ ನಿರಂತರ ಬೆಳವಣಿಗೆ ಮತ್ತು ಜನಸಂಖ್ಯೆಯ ಹೆಚ್ಚಳದಿಂದಾಗಿ ಹೊಸ ಸಂಪನ್ಮೂಲಗಳ ಹುಡುಕಾಟದ ಅವಶ್ಯಕತೆ ಕಂಡು ಬಂದಿತ್ತು. ಆಗ ಹೊಳೆದದ್ದೆ ಕಾವೇರಿ ನದಿಯ ಜಲ ಮೂಲ. ಕಾವೇರಿ ನದಿಯ ನೀರನ್ನು ಬೆಂಗಳೂರಿನ ಬೇಡಿಕೆಗೆ ಬಳಸಿ ಕೊಳ್ಳಲು ಕರ್ನಾಟಕ ಸರ್ಕಾರ ಅನುಮತಿ ಹೀಗಾಗಿ 1974 ರಿಂದೀಚೆಗೆ ನೀರು ಪೂರೈಕೆಗಾಗಿ ಕಾವೇರಿ ಜಲಮೂಲವನ್ನು ಹಂತಹಂತವಾಗಿ, ಘಟ್ಟಗಳಲ್ಲಿ ಬಳಸಿ ಕೊಳ್ಳವುದು ಪ್ರಾರಂಭವಾಯಿತು. ಪ್ರಸ್ತುತ ಬೆಂಗಳೂರಿನ ಜಲಮೂಲಗಳಾದ ಅರ್ಕಾವತಿ ಹಾಗೂ ಕಾವೇರಿ ನದಿಗಳಿಂದ ನೀರು ಪಡೆಯುವ ಯೋಜನೆಗಳನ್ನು ಮುಂದಿನ ಅಧ್ಯಾಯದಲ್ಲಿ ವಿವರಿಸಲಾಗಿದೆ.

 

ಸೋಸಿದ ಶುದ್ಧನೀರನ್ನು ಅರ್ಕಾವತಿ ನದಿಯಿಂದ ಬೆಂಗಳೂರಿಗೆ ತರುವ ಕೆಲಸಕ್ಕೆ ಚಾಲನೆ ದೊರೆತದ್ದು 1884 ರಲ್ಲಿ. ಬೆಂಗಳೂರಿನ ಪಶ್ಚಿಮಕ್ಕೆ 16 ಕಿ.ಮೀ ದೂರದಲ್ಲಿದ್ದ ಹೆಸರುಘಟ್ಟದಲ್ಲಿ ಜಲಸಂಗ್ರಹಣೆಗಾಗಿ ದೊಡ್ಡ ಕೆರೆಯೊಂದನ್ನು ನಿರ್ಮಿಸಲಾಯಿತು. 7 ಕಿ.ಮೀ ಉದ್ದವಿರುವ ತೆರೆದ ನಾಲೆಯಿಂದ ತರಬನಹಳ್ಳಿ ಮತ್ತು ಸೋಲದೇವನಹಳ್ಳಿಯ ಸಂಗ್ರಹಾಗಾರಗಳಿಗೆ 29.5 ಎಂ.ಎಲ್.ಡಿ ಕಚ್ಚಾ ನೀರನ್ನು ಹಾಯಿಸಲಾಯಿತು.  ತರಬನ ಹಳ್ಳಿಯಿಂದ ಸೇನಾಪಡೆಗಳಿಗಾಗಿ 7 ಎಂ.ಎಲ್.ಡಿ ನೀರನ್ನು ಮತ್ತು ಸೋಲದೇವನಹಳ್ಳಿಯಿಂದ 22.5 ಎಂ.ಎಲ್.ಡಿ ನೀರನ್ನು ನಗರಕ್ಕೆ ತಂದು ಮಲ್ಲೇಶ್ವರದಲ್ಲಿನ ಕಂಬೈನ್ಡ್ ಜುವೆಲ್ ಫಿಲ್ಪರ್ (ಸಿಜೆಎಫ್) ನಲ್ಲಿ ಶೇಖರಿಸಿ, ಅಲ್ಲಿ ಸಂಸ್ಕರಿಸಿ ಹೀಗೆ ಸಂಸ್ಕರಿಸಿದ ನೀರನ್ನು ನಗರಕ್ಕೆ ಪೂರೈಸುವ ಯೋಜನೆ ಇದಾಗಿತ್ತು.  ನಗರಕ್ಕೆ ಹೀಗೆ ಸಂಸ್ಕರಿಸಿದ ನೀರಿನ ಪೂರೈಕೆ ಪ್ರಾರಂಭವಾದದ್ದು 7ನೇ ಆಗಸ್ಟ್ 1896 ರಂದು.

 

ತಿಪ್ಪಗೊಂಡನ ಹಳ್ಳಿ

 

ಬೆಂಗಳೂರು ಬೆಳೆಯುತ್ತಿದ್ದಂತೆ ಮೇಲೆ ಹೇಳಿದ ನೀರು ಸರಬರಾಜು ಯೋಜನೆ ಬೆಂಗಳೂರಿಗೆ ಸಾಕಾಗುತ್ತಿರಲಿಲ್ಲವಾದುದರಿಂದ ಬೆಂಗಳೂರಿನ ಪಶ್ಚಿಮಕ್ಕೆ ಹೆಸರಘಟ್ಟ ಜಲಾಶಯದಿಂದ ಕೆಳಹರಿವಿನ 25 ಕಿ.ಮೀ ದೂರುದಲ್ಲಿರುವ ತಿಪ್ಪಗೊಂಡನ ಹಳ್ಳಿಯಲ್ಲಿ ‘ಚಾಮರಾಜಸಾಗರ’ ಎಂಬ ಹೊಸ ಜಲಾಶಯವೊಂದನ್ನು 1933ರಲ್ಲಿ ನಿರ್ಮಿಸಲಾಯಿತು. ಈ ಜಲಾಶಯದ ಮೊದಲಹಂತದ ಬುಡದಲ್ಲಿಯೇ ಕಾರ್ಯ 1933ರ ಮಾರ್ಚ್ ನಲ್ಲಿ ಪೂರ್ಣಗೊಂಡಿತು. ಇದರಿಂದ ಆಗ ಇದ್ದ ನೀರುಪೂರೈಕೆಗೆ 28 ಎಂ.ಎಲ್.ಡಿ ನೀರು ಹೆಚ್ಚಾಗಿ ದೊರೆಯುವಂತಾಯಿತು. ನಂತರದಲ್ಲಿ ಜಲಾಶಯದ ಗಾತ್ರವನ್ನು ಹಿಗ್ಗಿಸುವುದು, ಹೆಚ್ಚುವರಿ ಶುದ್ಧೀಕರಣ ಘಟಕಸ್ಥಾಪನೆ ಮತ್ತು ಪಂಪಿಂಗ್ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ನೀರು ಪೂರೈಕೆ ಸಾಮರ್ಥ್ಯವನ್ನು 149 ಎಂ.ಎಲ್.ಡಿ ಗಳಿಗೆ ವಿಸ್ತರಿಸಲಾಯಿತು.

ಎರಡು ಹಂತಗಳಲ್ಲಿ ನೀರನ್ನು ಪಂಪ್ ಮಾಡುವ ಮೂಲಕ ಅಂದರೆ 158 ಮೀ ಎತ್ತರದಲ್ಲಿರುವ ತಿಪ್ಪಗೊಂಡನ ಹಳ್ಳಿ ಮತ್ತು 168 ಮೀ ಎತ್ತರದಲ್ಲಿರುವ ತಾವರೆಕೆರೆಗಳಲ್ಲಿ ಕ್ರಮವಾಗಿ ಪಂಪ್ ಮಾದುವ ಮೂಲಕ ಈ ಸಾಮರ್ಥ್ಯವನ್ನು ವೃದ್ಧಿಸಲಾಯಿತು.  ಈ ನೀರನ್ನು ಕ್ರಮವಾಗಿ 600 ಮಿ.ಮೀ., 675 ಮಿ.ಮೀ ಹಾಗೂ 900 ಮಿ.ಮೀಟರ್ ವ್ಯಾಸದ ಕೊಳವೆಗಳಿಂದ ತಿಪ್ಪಗೊಂಡನ ಹಳ್ಳಿಗೆ ತರಲಾಗುತ್ತದೆ.  ಮುಂಗಾರು ಮಳೆಯ ವೈಪರೀತ್ಯಗಳಿಂದಾಗಿ ಮತ್ತು ಪಂಪ್ ಮಾಡುವ ವ್ಯವಸ್ಥೆಗಳಲ್ಲಿನ ದೋಷದಿಂದಾಗಿ ಸಾಧಾರಣ 117 ಎಂ.ಎಲ್.ಡಿಯಷ್ಟು ನೀರು ಮಾತ್ರ ಸಿಗುತ್ತಿದ್ದು ಇದನ್ನು ವೆಸ್ಟ್ ಆಫ್ ಕಾರ್ಡ್ ರಸ್ತೆ, ಭಿಕ್ಷಕರ ಕಾಲಿನಿ, ಕೇತಮಾರನಹಳ್ಳಿಗಳ ಕಂಬೈನ್ಡ್ ಜುವೇಲ್ ಫಿಲ್ಟರ್ ಗಳಿಗೆ ಪೂರೈಸಲಾಗುತ್ತಿತ್ತು.  ಮುಂಗಾರು ಮಳೆಯ ವೈಫಲ್ಯದಿಂದಾಗಿ ತಿಪ್ಪಗೊಂಡನಹಳ್ಳಿ ಜಲಾಶಯವು 1988 ರಲ್ಲಿಷ್ಟೆ ಪೂರ್ಣಪ್ರಮಾಣದಲ್ಲಿ ತುಂಬಿಕೊಂಡಿತ್ತು.  ಈ ಕಾರಣಗಳಿಂದಾಗಿ ಅರ್ಕಾವತಿ ವಲಯದ ಜಲಾಶಯಗಳನ್ನು ಕಾವೇರಿ ನೀರಿನಿಂದಲೇ ತುಂಬಿಸಲಾಗುತ್ತಿದೆ.

 

ಕಾವೇರಿ ನೀರು ಸರಬರಾಜು ಯೋಜನೆ

 

1960ರ ದಶದಲ್ಲಿ ಬೆಂಗಳೂರಿನಲ್ಲಿದ್ದ 16 ಲಕ್ಷ ಸಂಖ್ಯೆಗೆ ಅರ್ಕಾವತಿ ವಲಯದಿಂದ ಸರಬರಾಜಾಗುತ್ತಿದ್ದ 85 ಎಂ.ಎಲ್.ಡಿ ಯಷ್ಟು ನೀರು ಸಾಕಾಗುತ್ತಿರಲಿಲ್ಲ.  ಬೆಂಗಳೂರಿನ ನಿರಂತರ ಬೆಳವಣಿಗೆ ಮತ್ತು ಹೆಚ್ಚುತ್ತಲೇ ಇದ್ದ ಜನಸಂಖ್ಯೆಯ ಬೇಡಿಕೆ ಪೂರೈಸಲು ಹೊಸ ಜಲಸಂಪನ್ಯೂಲಗಳ ಶೋಧನೆಯ ಅಗತ್ಯ ಅತ್ಯಂತ ತೀವ್ರವಾಯಿತು.  ಬೆಂಗಳೂರಿನ ದಕ್ಷಿಣಕ್ಕೆ 86 ಕಿ.ಮೀ ದೂರದಲ್ಲಿ ಹರಿಯುತ್ತಿದ್ದ ಕಾವೇರಿ ಬತ್ತದ ಜಲಮೂಲವಾಗಿ ಬೆಂಗಳೂರಿನ ದಾಹತಣಿಸಲು ಸಿದ್ಧವಾಗಿತ್ತು.  ಕಾವೇರಿಯಿಂದ ಬೆಂಗಳೂರಿಗೆ ನೀರು ತರಲು ಕರ್ನಾಟಕ ಸರ್ಕಾರ ಅನುಮೋದನೆ ನೀಡಿತು.  1974 ರಿಂದ ಕಾವೇರಿ ಜಲಮೂಲವನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಯಿತು.  ನೀರು ಪೂರೈಕೆ ಸಾಮರ್ಥ್ಯವನ್ನು 135 ಎಂ.ಎಲ್.ಡಿಗೆ ವಿಸ್ತರಿಸುವ ಕಾವೇರಿ ನೀರು ಸರಬರಾಜು ಯೋಜನೆ ಘಟ್ಟ – 1 ನ್ನು 1974ರಲ್ಲಿ ಕಾರ್ಯರೂಪಕ್ಕೆ ತರಲಾಯಿತು.  ಮತ್ತೂ 135 ಎಂ.ಎಲ್.ಡಿ ನೀರು ಪಡೆಯಲು ಕಾವೇರಿ ಯೋಜನೆ ಘಟ್ಟ – 11 ನ್ನು 1982ರಲ್ಲಿ ಕಾರ್ಯಗತಗೊಳಿಸಲಾಯಿತು.  ಕಾವೇರಿ ಯೋಜನೆ ಘಟ್ಟ – 111 ನ್ನು 1994-95 ರಲ್ಲಿ ಕಾರ್ಯಗತಗೊಳಿಸಲಾಯಿತು.  ಈ ಹಂತದಲ್ಲಿ 270 ಎಂ.ಎಲ್.ಡಿ ನೀರು ದೊರೆಯುವಂತಾಯಿತು.  ಕಾವೇರಿ ಯೋಜನೆ ಘಟ್ಟ IV ರ ಮೊದಲ ಹಂತವನ್ನು 2002ರಲ್ಲಿ ಕಾರ್ಯಗತಗೊಳಿಸಿದಾಗ ಇನ್ನೂ 270 ಎಂ.ಎಲ್.ಡಿ ನೀರು ಬೆಂಗಳೂರಿಗೆ ಲಭ್ಯವಾಯಿತು.  2012 ರಲ್ಲಿ ಎರಡನೆ ಹಂತ ಪೂರ್ಣಗೊಂಡಿತು. ಇದರಿಂದ 500 ಎಂ.ಎಲ್.ಡಿ ದೊರೆಯುವಂತಾಯಿತು ನೀರು ಪೂರೈಕೆ ಯೋಜನೆಯ ವಿವರಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ.

 

ಪಟ್ಟಿ 1: ನೀರು ಸರಬರಾಜು ಯೋಜನೆ

ಕಾವೇರಿ ಮೂಲದಿಂದ ಪ್ರಸ್ತುತ ಸರಬರಾಜು

1450 ಎಂ.ಎಲ್.ಡಿ

ಪ್ರಸ್ತುತ ಪೂರೈಕೆ ಪಡೆಯುತ್ತಿರುವ ಜನಸಂಖ್ಯೆ  110 ಹಳ್ಳಿಗಳು ಸೇರಿದಂತೆ

12.9 ದಶ ಲಕ್ಷ

ನೀರು ಪೂರೈಕೆ ಪ್ರದೇಶದ ವಿಸ್ತಾರ   ಮತ್ತು ಜನಸಂಖ್ಯೆ

575 ಚದರ ಕಿಲೋಮೀಟರ್ & 10  ಲಕ್ಷ

ಮನೆ ಸೇವೆ ಸಂಪರ್ಕಗಳು (ಪ್ರಸ್ತುತ)

10.15 ಲಕ್ಷ

ನೀರು ಸರಬರಾಜು ಕೊಳವೆಗಳ ಒಟ್ಟು ಉದ್ದ

8746 ಕಿಲೋಮೀಟರ್

ಪೈಪುಗಳ ವ್ಯಾಸದ  ಶ್ರೇಣಿ

100 - 1800 ಮಿಲಿಮೀಟರ್

ನೆಲಮಟ್ಟದ ಜಲಸಂಗ್ರಹಾಗಾರಗಳು

57 (885 ಮಿಲಿಯನ್ ಲೀಟರ್)

ಓವರ್ ಹೆಡ್ ಟ್ಯಾಂಕ್‌ಗಳ ಸಂಖ್ಯೆ

36 (33 ಮಿಲಿಯನ್ ಲೀಟರ್)

ನೀರು ಪಂಪಿಂಗ್ ಸೈಷನುಗಳು (ಬೂಸ್ಟರ್ ಸೈಷನ್)

62

ನೀರು ಸಾಗಿಸುವ ವಾಟರ್ ಟ್ಯಾಂಕರ್ ಲಾರಿಗಳು

68

ಪ್ರತಿ ತಿಂಗಳು ಪೂರೈಸುವ ನೀರಿನ ಪ್ರಮಾಣ

42,200 ಮಿಲಿಯನ್ ಲೀಟರ್

ಸರಾಸರಿ ತಲಾವಾರು ಬಳಕೆ

108 ಲೀ. ಪ್ರತಿದಿನ

  

 

ಒಳಚರಂಡಿ ವ್ಯವಸ್ಥೆಯ ಪಕ್ಷಿನೋಟ

 

ಬೆಂಗಳೂರು ಎರಡು ನದಿಗಳ ಜಲಾನಯನ ಪ್ರದೇಶಗಳ ನಡುವೆ ನೆಲೆಗೊಂಡಿದೆ, ಪಶ್ಚಿಮಕ್ಕೆ ಅರ್ಕಾವತಿ ನದಿ ಮತ್ತು ಪೂರ್ವಕ್ಕೆ ದಕ್ಷಿಣ ಪೆನ್ನಾರ್ ನದಿ.  ಸ್ಥಳೀಯ ಮೇಲ್ಮೈ ಲಕ್ಷಣದಂತೆ, ಬೆಂಗಳೂರು ಅನೇಕ ಕಣಿವೆ ಸರಣಿಗಳಿಂದಾಗಿದೆ.  ನಗರದ ಉತ್ತರ ಭಾಗದಲ್ಲಿರುವ ಪ್ರಸ್ಥ ಭೂಮಿಯಿಂದ ಪ್ರಾರಂಭವಾಗುವ ಈ ಕಣಿವೆಗಳು ಈ ಮೇಟ್ರೋಪಾಲಿಟಿನ್ ನಗರದ ದಕ್ಷಣ ಭಾಗದ ವಿಸ್ತೃತ ಮೈದಾನ ಪ್ರದೇಶದ ಕಡೆಗೆ ಇಳಿಜಾರುತ್ತ ಸಾಗಿವೆ.  ಈ ಕಣಿವೆಗಳನ್ನು ಸ್ಥೂಲವಾಗಿ ಕೋರಮಂಗಲ, ಚಳ್ಳಘಟ್ಟ ಮತ್ತು ವೃಷಭಾವತಿ ಕಣಿವೆಗಳೆಂದು ವರ್ಗೀಕರಿಸಲಾಗಿದೆ.  ಸಾಮಾನ್ಯವಾಗಿ ಈ ಮೂರು ಕಣಿವೆಗಳು ಉತ್ತರದಿಂದ ದಕ್ಷಿಣದೆಡೆಗೆ ಸಾಗುತ್ತವೆ.  ಕಣಿವೆಯ ದಕ್ಷಿಣ ಭಾಗದ ಇಳಿಜಾರಿನಲ್ಲಿರುವ ನಗರದ ಪ್ರಮುಖ ವಸತಿ ಪ್ರದೇಶವನ್ನು ವಿಭಜಿಸುವ ಈ ಕಣಿವೆ ಮೂರು ಪ್ರತ್ಯೇಕ ಮತ್ತು ಪ್ರಮುಖ ನೀರು ಹರಿವಿನ ಆಕರಗಳನ್ನು ಸೃಷ್ಟಿಸುತ್ತದೆ.  ಹೆಬ್ಬಾಳ ಸರಣಿ ಎಂದು ಕರೆಯಲ್ಪಡುವ ನಾಲ್ಕನೆಯ ಕಣಿವೆ ವ್ಯವಸ್ಥೆಯು ಕಣಿವೆಯ ಉತ್ತರ ಭಾಗದಲ್ಲಿ ನೀರು ಹರಿಯುವ ನೈಸರ್ಗಿಕ ಕಾಲುವೆಯನ್ನು ರೂಪಿಸಿದ್ದು – ನಗರದ ವಾಯುವ್ಯ ದಿಕ್ಕಿನತ್ತ ಸಾಗುತ್ತದೆ.  ಇವಲ್ಲದೇ ಇನ್ನೂ 5 ಸಣ್ಣ ಕಣಿವೆಗಳೂ ಇವೆ.  ನಗರದ ದಕ್ಷಿಣ ಭಾಗದಲ್ಲಿರುವ ಕತ್ರಿಗುಪ್ಪ – ತಾವರೆಕರೆ ಕಣಿವೆಗಳು, ವಾಯವ್ಯ ಭಗದ ಅರ್ಕಾವತಿ ಮತ್ತು ಕೇತಮಾರನ ಹಳ್ಳಿ ಕಣಿವೆಗಳು ಮತ್ತು ಪೂರ್ವಭಾಗದಲ್ಲಿರುವ ಮಾರತ ಹಳ್ಳಿ ಕಣಿವೆಗಳು ಮೂರು ಪ್ರಮುಖ ಕಣಿವೆಗಳ ಉಪಕಣಿವೆಗಳ ವ್ಯಾಪ್ತಿಯ ಹೊರ ಭಾಗದಲ್ಲಿದ್ದು ಈ ಕಣಿವೆಗಳ ನೀರು ಸ್ವತಂತ್ರವಾಗಿ ಸುತ್ತಣ ಪ್ರದೇಶಗಳಿಗೆ ಹರಿಯುತ್ತದೆ.  ನಗರದ ಇತರ ವಸತಿ ಪ್ರದೇಶಗಳು ಈ ಭಾಗದಲ್ಲಿವೆ.

 

ಕಣಿವೆಗಳ ಈ ನೈಸರ್ಗಿಕ ರೂಪುರೇಷೆಗಳು ಮತ್ತು ಅವುಗಳ ಉಪಕಣಿವೆಗಳ ಇಳಿಜಾರುಗಳು ಬೆಂಗಳೂರಿಗೆ ನೈಸರ್ಗಿಕವಾದ ನೀರು ಹರಿವ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿವೆ.  ಕೊಳಚೆ ಮತ್ತು ಮಳೆ ನೀರುಗಳೆರಡೂ ನಿಸರ್ಗದತ್ತ ಗುರುತ್ವಾಕರ್ಷಣ ಬಲದಿಂದಲೇ ನಗರದ ಹೊರಕ್ಕೆ ಹರಿಯುತ್ತವೆ.

 

 ಬೆಂಗಳೂರಿನಲ್ಲಿ ವಸತಿ ಮತ್ತು ಕೈಗಾರಿಕೆಗಳಿಂದ ಉತ್ಪನ್ನ ವಾಗುವ ಕೊಳಚೆ ನೀರನ್ನು ಒಳಚರಂಡಿಗಳ ಮೂಲಕ ಸಾಗಿಸುವ ಒಳಚರಂಡಿ ವ್ಯವಸ್ಥೆಯನ್ನು 1922 ನೇ ವರ್ಷದಿಂದ ಪ್ರಾರಂಭಿಸಲಾಯಿತು.  ಮೊದಲಿಗೆ ಈ ವ್ಯವಸ್ಥೆ ಬೆಂಗಳೂರು ಕೇಂದ್ರ ಭಾಗದಲ್ಲಿ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಜಾರಿಗೆ ಬಂದಿತು.  ನಿಧಾನವಾಗಿ ಈ ವ್ಯವಸ್ಥೆಯನ್ನು ವಿಸ್ತರಿಸುತ್ತಾ ಹೋಗಲಾಯಿತಾದರೂ, 1950 ರ ವರೆಗೆ ಯಾವುದೇ ಪ್ರಮುಖ ಒಳಚರಂಡಿ ವ್ಯವಸ್ಥೆಯ ನಿರ್ಮಾಣ ಆಗಿರಲಿಲ್ಲ.  ಬೆಂಗಳೂರು ಜಲಮಂಡಳಿಯನ್ನು (ಬಿ.ಡಬ್ಲ್ಯು.ಎಸ್.ಎಸ್.ಬಿ) 1964 ರಲ್ಲಿ ಸ್ಥಾಪಿಸಿದ ನಂತರ ನಗರದ ಎಲ್ಲ ಪ್ರದೇಶಗಳಲ್ಲೂ ಒಳಚರಂಡಿ ನಿರ್ಮಾಣ ಕಾರ್ಯವನ್ನು ಹಂತಹಂತವಾಗಿ ಕೈಗೆತ್ತಿಕೊಳ್ಳಲಾಯಿತು.  ಅಂತೆಯೇ ಕೊಳಚೆ ನೀರನ್ನು ಶುದ್ಧೀಕರಿಸಿ ಉಳಿದ ನೀರನ್ನು ಸಹಜ ಕಣಿವೆಗಳಿಗೆ ಹರಿಯ ಬಿಡುವ ಸಂಸ್ಕರಣ/ ಶುದ್ಧೀಕರಣ ಪ್ರಕ್ರಿಯೆಗೂ ಚಾಲನೆ ನೀಡಲಾಯಿತು.  ಕೋರಮಂಗಲ, ಚಳ್ಳಘಟ್ಟ, ಹೆಬ್ಬಾಳ ಮತ್ತು ವೃಷಭಾವತಿ ಕಣಿವೆಗಳಲ್ಲಿ ಅಂದಾಜು 1400 ಎಂ.ಎಲ್.ಡಿಯಷ್ಟು ವ್ಯರ್ಥನೀರು ಹರಿದು ಹೋಗುತ್ತದೆ.  ಬೆಂಗಳೂರುನಲ್ಲಿ ಸಾಕಷ್ಟು ಕೊಳವೆ ಭಾವಿಗಳಿರುವುದರಿಂದ ಮತ್ತು ಇವುಗಳಿಂದ ಎಷ್ಟು ನೀರು ಪಡೆಯಲಾಗುತ್ತದೆ ಎಂಬ ವೈಜ್ಞಾನಿಕ ಅಂದಾಜು ಇಲ್ಲದಿರುವುದರಿಂದ ಕೊಳಚೆ ನೀರಿನ ಪ್ರಮಾಣವನ್ನು ನಿಖರವಾಗಿ ಅಳತೆಮಾಡಲು ಸಾಧ್ಯವಾಗದು.  ಹಳೆಯ ಬೆಂಗಳೂರು ನಗರದ ಸುತ್ತಳತೆ 245 ಚದರ ಕಿ.ಮೀ ನಷ್ಟಿತ್ತು.  ಈ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಸಿ, ಇಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರನ್ನು ಸಂರ್ಗಹಿಸಿ, ಸಾಗಿಸಿ ಸಂಸ್ಕರಿಸುವ ಹೊಣೆಗಾರಿಕೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯದಾಗಿತ್ತು.  ನೀರು ಪೂರೈಕೆಗಾಗಿ ಜಲಮಂಡಳಿ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿವೆ.  ಒಳಚರಂಡಿ ಕೊಳಚೆಯನ್ನು ಸಾಗಿಸಲು 3300 ಕಿ.ಮೀ.ನಷ್ಟು ಉದ್ದ ಪೈಪ್ ಲೈನ್ ಗಳನ್ನು ಹಾಕಲಾಗಿದೆ.  ಕೊಳಚೆ ನೀರನ್ನು ಶುದ್ಧೀಕರಣ ಘಟಕಗಳಿಗೆ ಸಾಗಿಸಲು ಉಪಯೋಗಿಸಲಾಗುತ್ತಿರುವ ಪೈಪ್ ಗಳು 40 ರಿಂದ 50 ವರ್ಷಗಳಷ್ಟು ಹಳೆಯವು, ತುಂಬ ಹಳೆಯದಾದ ಪೈಪ್ ಲೈನ್ಗಳ ಉಪಯೋಗದ ಪರಿಣಾಮವಾಗಿ, ಒಳಚರಂಡಿಗಳ ಅತಿಕ್ರಮಣ, ಒಳಚರಂಡಿಗಳು ಅನೇಕ ಕಾರಣಗಳಿಂದ ಒಡೆದು ಹೋಗುವುದು, ಒಳಚರಂಡಿ ಪೈಪುಗಳು ತುಕ್ಕು ಹಿಡಿಯುವುದು, ಒಳಚರಂಡಿಗಳನ್ನು ಮನಬಂದಂತೆ ಬಳಸುವುದು, ಮಳೆನೀರು ಕಾಲುವೆಗಳ ಪಕ್ಕದಲ್ಲಿಯೇ ಕಟ್ಟಿರುವ ಮನೆಗಳಿಂದ ಈ ಕಾಲುವೆಗಳಿಗೆ ನೇರವಾಗಿ ಕೊಳಚೆ ಬಿಡುವುದು, ಹೊಸ ಲೇಔಟುಗಳು, ಅಪಾರ್ಟ್ ಮೆಂಟ್ ಗಳಿಂದ ನೇರವಾಗಿ ಕೊಳಚೆ ನೀರು ಬಿಟ್ಟುಬಿಡುವುದು, ಮೊದಲಾದ ಹಲವಾರು ಸಮಸೈಗಳಿವೆ. ಈ ಕಾರಣಗಳಿಂದ ಉದ್ಭವಿಸುವ ವ್ಯರ್ಥನೀರು ನೇರವಾಗಿ ಮಳೆನೀರು ಕಾಲುವೆಗಳೊಂದಿಗೆ ಬೆರೆತು ಕೆರೆಗಳನ್ನು ಸೇರುವುದು, ಕೊಳಚೆ ನೀರು ಸಂಗ್ರಹ, ಮೊದಲಾದ ಅಪಾಯಗಳು ಜಲಮಂಡಳಿಗೆ ದೊಡ್ಡಸವಾಲಾಗಿವೆ.  ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಒಳಚರಂಡಿ ವ್ಯವಸ್ಥೆಯ ವಿವರಗಳು ಈ ರೀತಿಯಿವೆ:

 

 

      ಒಳಚರಂಡಿ ವ್ಯವಸ್ಥೆಯ ಒಟ್ಟು ಉದ್ದ  8387 ಕಿ.ಮೀ.
      ಮ್ಯಾನ್ ಹೋಲ್ ಗಳ ಸಂಖ್ಯೆ   2.69 ಲಕ್ಷ
      ಒಳಚರಂಡಿ ವ್ಯವಸ್ಥೆ ಕಲ್ಪಿಸಿದ ಮನೆಗಳು   10.00 ಲಕ್ಷ
      ಒಳಚರಂಡಿ ವ್ಯವಸ್ಥೆಯನ್ನು ನೋಡಿಕೊಳುವ ಯಂತ್ರಗಳು    175 
      ಶೋಧನಾಯಂತ್ರಗಳು (ಡಿಸ್ಟಿಲಿಂಗ್ ಮಷೀನ್ ಗಳು)    40
     ಒಳಚರಂಡಿ ವ್ಯವಸ್ಥೆಯ ಲ್ಯಾಟರಲ್ ಗಳು (300 ಮಿಲಿಮೀ ವ್ಯಾಸಕ್ಕೂ ಚಿಕ್ಕದಾದ)    6905.7 ಕಿ.ಮೀ
     ಒಳಚರಂಡಿ ಕೊಳವೆಗಳು (300 ಮಿಲಿಮೀ ವ್ಯಾಸಕ್ಕೂ ಹೆಚ್ಚನದ್ದು)    1481 ಕಿ.ಮೀ
     ಸಂಸ್ಕರಣಾ ಘಟಕಗಳು     33
     ಉತ್ಪನ್ನವಾಗುವ ಕೊಳಚೆ ನೀರು –     1440 ಎಂ.ಎಲ್.ಡಿ
     ಕೊಳಚೆ ಸಂಸ್ಕರಣಾ ಸಾಮರ್ಥ್ಯ     1372.5 ಎಂ.ಎಲ್.ಡಿ

 

 

 ಅಸ್ತಿತ್ವದಲ್ಲಿರುವ  ತ್ಯಾಜ್ಯನೀರು  ಸಂಸ್ಕರಣಾ  ಘಟಕಗಳು(STP)

 

ತ್ಯಾಜ್ಯನೀರು  ಸಂಸ್ಕರಣಾ  ಘಟಕಗಳು(STP)  ಮತ್ತು  ಇಂಟರ್‌ಮೀಡಿಯೇಟ್‌ ಸೇವೇಜ್‌ ಪುಂಪಿಂಗ್ ಕೇಂದ್ರಗಳ ಪಟ್ಟಿ

ಕ್ರ. ಸಂ

ತ್ಯಾಜ್ಯನೀರು  ಸಂಸ್ಕರಣಾ  ಘಟಕಗಳು  ಹೆಸರು

ಕಣಿವೆಗಳ  ಹೆಸರು

ಸಂಸ್ಕರಣಾ  ಘಟಕಗಳ  ವಿಧಗಳು 

(ಎಫ್ಎಸ್.ಟಿ.ಪಿ & ಎಸ್.ಟಿ.ಪಿ)

 ಸಂಸ್ಕರಣಾ  ಘಟಕದ  

ಸಾಮರ್ಥ್ಯ  

(KLD )

ತಂತ್ರಜ್ಞಾನದ  ಬಳಕೆ‌  (ಅಕ್ಟಿವೇಟೆಡ್‌ ಸ್ಲಡ್ಜ್‌ ಪರೋಸಸ್, ಮೆಂಬರೇನ್‌ ಬಯೋ-ರಿಯಾಕ್ಟರ್‌, ಮೂವಿಇಂಗ್‌ ಬೆಡ್‌ ಬಯೋ-ಫಿಲಿಮ್‌ ರಿಯಾಟ್ಟರ್‌, ಓಪನ್‌ ಟೆಕ್ನಾಲಜಿ, ಆಕ್ಷಿಡೀಕರಣ ಕೊಳ, ಸೇಕ್ಟೆನ್ಸಿಂಗ್‌ ಬ್ಯಾಚ್‌ ರಿಯಾಕ್ಟರ್, ಅಪ್‌-ಫ್ಲೋ ಅನೆರಾಬೊಯಿಕ್‌ ಬ್ಲಾಂಕೆಟ್‌ ರಿಯಾಕ್ಟರ್)

1.

ಕೆ & ಸಿ ವ್ಯಾಲಿ  218  ಎಂ.ಎಲ್.ಡಿ

ಕೆ&ಸಿ ವ್ಯಾಲಿ

ಎಸ್.ಟಿ.ಪಿ

218000

ಅಕ್ಟಿವೇಟೆಡ್‌  ಸ್ಲಡ್ಜ್‌  ಪರೋಸಸ್

2.

ಕೆ & ಸಿ ವ್ಯಾಲಿ  30   ಎಂ.ಎಲ್.ಡಿ

ಕೆ&ಸಿ ವ್ಯಾಲಿ

ಎಸ್.ಟಿ.ಪಿ

30000

ಎಕ್ಸಟೆಂಡೆಡ್‌  ಎರೇಸನ್‌

3.

ಕೆ & ಸಿ ವ್ಯಾಲಿ   60   ಎಂ.ಎಲ್.ಡಿ

ಕೆ&ಸಿ ವ್ಯಾಲಿ

ಎಸ್.ಟಿ.ಪಿ

60000

ಅಕ್ಟಿವೇಟೆಡ್‌ ಸ್ಲಡ್ಜ್‌ ಪ್ರಕ್ರಿಯೊಂದಿಗೆ ಬಿ.ಎನ್.ಆರ್‌ ತೆಗೆಯುವುದು  ಹಾಗೂ  ವಿದ್ಯುತ್‌ ಉತ್ಪಾದಿಸುವುದು.

4.

ಲಾಲ್‌ ಬಾಗ್   1.5   ಎಂ.ಎಲ್.ಡಿ

ಕೆ&ಸಿ ವ್ಯಾಲಿ

ಟಿ.ಟಿ.ಪಿ

1500

ಅಕ್ಟಿವೇಟೆಡ್‌ ಸ್ಲಡ್ಜ್‌ ಪ್ರಕ್ರಿಯೆ ಮತ್ತು ಯು.ವಿ ವಿಧಾನ

5.

ಕಬ್ಬನ್‌ ಪಾರ್ಕ್‌   4.0   ಎಂ.ಎಲ್.ಡಿ

ಕೆ&ಸಿ ವ್ಯಾಲಿ

ಟಿ.ಟಿ.ಪಿ

4000

ಮೆಂಬರೇನ್‌ ಬಯೋ-ರಿಯಾಕ್ಟರ್‌(ಎಂ.ಬಿ.ಆರ್)‌

6.

ಬೆಲ್ಲಂದೂರ್‌ ಅಮ್ಮಣಿ ಕೆರೆ   90     ಎಂ.ಎಲ್.ಡಿ

ಕೆ&ಸಿ ವ್ಯಾಲಿ

ಎಸ್.ಟಿ.ಪಿ

90000

ಅಕ್ಟಿವೇಟೆಡ್‌ ಸ್ಲಡ್ಜ್‌ ಪ್ರಕ್ರಿಯೊಂದಿಗೆ ಬಿ.ಎನ್.ಆರ್‌ ತೆಗೆಯುವುದು

7.

ಕಾಡಬೀಸನಹಳ್ಳಿ   50   ಎಂ.ಎಲ್.ಡಿ

ಕೆ&ಸಿ ವ್ಯಾಲಿ

ಎಸ್.ಟಿ.ಪಿ

50000

ಅಕ್ಟಿವೇಟೆಡ್‌  ಸ್ಲಡ್ಜ್‌  ಪ್ರಕ್ರಿಯೆ

8.

ಕಾಡುಗೊಡಿ   5.0   ಎಂ.ಎಲ್.ಡಿ

ಕೆ&ಸಿ ವ್ಯಾಲಿ

ಎಸ್.ಟಿ.ಪಿ

5000

ಸೇಕ್ಟೆನ್ಸಿಂಗ್‌  ಬ್ಯಾಚ್‌  ರಿಯಾಕ್ಟರ್

9.

ಹಲಸೂರು   2.0   ಎಂ.ಎಲ್.ಡಿ

ಕೆ&ಸಿ ವ್ಯಾಲಿ

ಎಸ್.ಟಿ.ಪಿ

2000

ಸೇಕ್ಟೆನ್ಸಿಂಗ್‌  ಬ್ಯಾಚ್‌  ರಿಯಾಕ್ಟರ್

10.

ಆಗರಮ್‌   35.0   ಎಂ.ಎಲ್.ಡಿ

ಕೆ&ಸಿ ವ್ಯಾಲಿ

ಎಸ್.ಟಿ.ಪಿ

35000

ಸೇಕ್ಟೆನ್ಸಿಂಗ್‌  ಬ್ಯಾಚ್‌  ರಿಯಾಕ್ಟರ್  ನೊಂದಿಗೆ  ಬಿ.ಎನ್.ಆರ್‌  ತೆಗೆಯುವುದು

11.

ಹುಲಿಮಾವು   10   ಎಂ.ಎಲ್.ಡಿ

ಕೆ&ಸಿ ವ್ಯಾಲಿ

ಎಸ್.ಟಿ.ಪಿ

10000

ಸೇಕ್ಟೆನ್ಸಿಂಗ್‌  ಬ್ಯಾಚ್‌ ರಿಯಾಕ್ಟರ್  ನೊಂದಿಗೆ  ಬಿ.ಎನ್.ಆರ್‌  ತೆಗೆಯುವುದು

12.

ಚಿಕ್ಕಬೇಗೂರು    5   ಎಂ.ಎಲ್.ಡಿ

ಕೆ&ಸಿ ವ್ಯಾಲಿ

ಎಸ್.ಟಿ.ಪಿ

5000

ಸೇಕ್ಟೆನ್ಸಿಂಗ್‌  ಬ್ಯಾಚ್‌ ರಿಯಾಕ್ಟರ್  ನೊಂದಿಗೆ  ಬಿ.ಎನ್.ಆರ್‌  ತೆಗೆಯುವುದು

13.

ಸಾರಕ್ಕಿ   5    ಎಂ.ಎಲ್.ಡಿ

ಕೆ&ಸಿ ವ್ಯಾಲಿ

ಎಸ್.ಟಿ.ಪಿ

5000

ಸೇಕ್ಟೆನ್ಸಿಂಗ್‌  ಬ್ಯಾಚ್‌ ರಿಯಾಕ್ಟರ್  ನೊಂದಿಗೆ  ಬಿ.ಎನ್.ಆರ್‌  ತೆಗೆಯುವುದು

14.

ಕೆ.ಆರ್.‌ ಪುರಂ Ph-I  20  ಎಂ.ಎಲ್.ಡಿ

ಕೆ&ಸಿ ವ್ಯಾಲಿ

ಎಸ್.ಟಿ.ಪಿ

20000

ಯು.ಎ.ಎಸ್.ಬಿ

15.

ಕೆ.ಆರ್.‌ ಪುರಂ  20   ಎಂ.ಎಲ್.ಡಿ

ಕೆ&ಸಿ ವ್ಯಾಲಿ

ಎಸ್.ಟಿ.ಪಿ

20000

ಎಸ್.ಬಿ.ಆರ್

16.

ಯಲ್ಲಮಲ್ಲಪ್ಪ ಚೆಟ್ಟಿ ಕೆರೆ   15  ಎಂ.ಎಲ್.ಡಿ

ಕೆ&ಸಿ ವ್ಯಾಲಿ

ಎಸ್.ಟಿ.ಪಿ

15000

ಎಸ್.ಬಿ.ಆರ್

17.

ರಾಜಕೆನಲ್‌ Ph-I (ಹೊಸ)   40   ಎಂ.ಎಲ್.ಡಿ

ಹೆಚ್‌ ವ್ಯಾಲಿ

ಎಸ್.ಟಿ.ಪಿ

40000

ಅಕ್ಟಿವೇಟೆಡ್‌  ಸ್ಲಡ್ಜ್‌  ಪರೋಸಸ್

18.

ಹೆಬ್ಬಾಳ   60   ಎಂ.ಎಲ್.ಡಿ

ಹೆಚ್‌ ವ್ಯಾಲಿ

ಎಸ್.ಟಿ.ಪಿ

60000

ಅಕ್ಟಿವೇಟೆಡ್‌  ಸ್ಲಡ್ಜ್‌  ಪರೋಸಸ್

19.

ಜಕ್ಕೂರು   15   ಎಂ.ಎಲ್.ಡಿ

ಹೆಚ್‌ ವ್ಯಾಲಿ

ಟಿ.ಟಿ.ಪಿ

15000

ಮೂವಿಇಂಗ್‌  ಬೆಡ್‌  ಬಯೋ- ಫಿಲಿಮ್‌ ರಿಯಾಟ್ಟರ್‌

20.

ಯಲಹಂಕ Ph-I   10   ಎಂ.ಎಲ್.ಡಿ

ಹೆಚ್‌ ವ್ಯಾಲಿ

ಟಿ.ಟಿ.ಪಿ

10000

ಅಕ್ಟಿವೇಟೆಡ್‌  ಸ್ಲಡ್ಜ್‌  ಪರೋಸಸ್

21.

ರಾಜಕೆನಲ್‌ (ಓಲ್ಡ್)‌   40   ಎಂ.ಎಲ್.ಡಿ

ಹೆಚ್‌ ವ್ಯಾಲಿ

ಎಸ್.ಟಿ.ಪಿ

40000

ಅಕ್ಟಿವೇಟೆಡ್‌  ಸ್ಲಡ್ಜ್‌  ಪರೋಸಸ್

22.

ಹೊರಮಾವು  ಅಗರ   20   ಎಂ.ಎಲ್.ಡಿ

ಹೆಚ್‌ ವ್ಯಾಲಿ

ಎಸ್.ಟಿ.ಪಿ

20000

ಸೇಕ್ಟೆನ್ಸಿಂಗ್‌  ಬ್ಯಾಚ್‌  ರಿಯಾಕ್ಟರ್ 

23.

ನಾಗಸಂದ್ರ   20   ಎಂ.ಎಲ್.ಡಿ

ವಿ ವ್ಯಾಲಿ

ಎಸ್.ಟಿ.ಪಿ

20000

ಸೇಕ್ಟೆನ್ಸಿಂಗ್‌  ಬ್ಯಾಚ್‌  ರಿಯಾಕ್ಟರ್ 

24.

ಮಲ್ಲತಹಳ್ಳಿ (ಓಲ್ಡ್)‌   5.0   ಎಂ.ಎಲ್.ಡಿ

ವಿ ವ್ಯಾಲಿ

ಎಸ್.ಟಿ.ಪಿ

5000

ಸೇಕ್ಟೆನ್ಸಿಂಗ್‌  ಬ್ಯಾಚ್‌  ರಿಯಾಕ್ಟರ್ 

25.

ವಿ. ವ್ಯಾಲಿ   150   ಎಂ.ಎಲ್.ಡಿ

ವಿ ವ್ಯಾಲಿ

ಎಸ್.ಟಿ.ಪಿ

150000

ಅಕ್ಟಿವೇಟೆಡ್‌  ಸ್ಲಡ್ಜ್‌ ಪ್ರಕ್ರಿಯೊಂದಿಗೆ  ಬಿ.ಎನ್.ಆರ್‌   ತೆಗೆಯುವುದು  ಹಾಗೂ  ವಿದ್ಯುತ್‌  ಉತ್ಪಾದಿಸುವುದು.

26.

ನಾಗಸಂದ್ರ (ನ್ಯೂ)   20   ಎಂ.ಎಲ್.ಡಿ

ವಿ ವ್ಯಾಲಿ

ಎಸ್.ಟಿ.ಪಿ

20000

ಅಕ್ಟಿವೇಟೆಡ್‌  ಸ್ಲಡ್ಜ್‌  ಪರೋಸಸ್

27.

ಚಿಕ್ಕಬಾಣಾವರ   5   ಎಂ.ಎಲ್.ಡಿ

ವಿ ವ್ಯಾಲಿ

ಎಸ್.ಟಿ.ಪಿ

5000

ಸೇಕ್ಟೆನ್ಸಿಂಗ್‌  ಬ್ಯಾಚ್‌  ರಿಯಾಕ್ಟರ್

28.

ಮಲ್ಲಸಂದ್ರ   75   ಎಂ.ಎಲ್.ಡಿ

ವಿ ವ್ಯಾಲಿ

ಎಸ್.ಟಿ.ಪಿ

75000

ಅಕ್ಟಿವೇಟೆಡ್‌  ಸ್ಲಡ್ಜ್‌  ಪರೋಸಸ್

29.

ವಿ.ವ್ಯಾಲಿ   180 ಎಂ.ಎಲ್.ಡಿ ದ್ವಿತಿಯ   (60 ಎಂ.ಎಲ್.ಡಿ ತೃತಿಯ)

ವಿ ವ್ಯಾಲಿ

ಎಸ್.ಟಿ.ಪಿ

180000

2 ಹಂತದ  ಟ್ರಿಕ್ಲಿಂಗ್‌  ಫಿಲ್ಟರ್

30.

ವಿ.ವ್ಯಾಲಿ   60   ಎಂ.ಎಲ್.ಡಿ ತೃತಿಯ

ವಿ ವ್ಯಾಲಿ

ಎಸ್.ಟಿ.ಪಿ

60000

ಹೆಚ್ಚಿನ  ದರ  ಸ್ಪಷ್ಟೀಕರಣ- DENSADEG

31.

ಕೆಂಪಾಂಬುದಿ   1.0   ಎಂ.ಎಲ್.ಡಿ

ವಿ ವ್ಯಾಲಿ

ಎಸ್.ಟಿ.ಪಿ

1000

ಅಕ್ಟಿವೇಟೆಡ್‌  ಸ್ಲಡ್ಜ್‌  ಪರೋಸಸ್

32.

ದೊಡ್ಡಬೆಲೆ   20   ಎಂ.ಎಲ್.ಡಿ

ವಿ ವ್ಯಾಲಿ

ಎಸ್.ಟಿ.ಪಿ

20000

ಸೇಕ್ಟೆನ್ಸಿಂಗ್‌  ಬ್ಯಾಚ್‌  ರಿಯಾಕ್ಟರ್

33.

ಕೆಂಗೇರಿ   60   ಎಂ.ಎಲ್.ಡಿ

ವಿ ವ್ಯಾಲಿ

ಎಸ್.ಟಿ.ಪಿ

60000

ಸೇಕ್ಟೆನ್ಸಿಂಗ್‌  ಬ್ಯಾಚ್‌ ರಿಯಾಕ್ಟರ್  ನೊಂದಿಗೆ  ಬಿ.ಎನ್.ಆರ್‌  ತೆಗೆಯುವುದು

 

ನಿರ್ಮಾಣ  ಹಂತದಲ್ಲಿರುವ  ಎಸ್.ಟಿ.ಪಿಗಳು

 

ಕ್ರ. ಸಂ

ಹೆಸರು

 ಸಾಮರ್ಥ್ಯ

ಎಂ.ಎಲ್.ಡಿ

ಹತ್ತಿರದಲ್ಲಿರುವ    ಸ್ಥಳ

ಸಂಸ್ಕರಣಾ  ಘಟಕದ 

ಮಟ್ಟ

ತ್ಯಾಜ್ಯನೀರುನ್ನು   ಸಂಸ್ಕರಿಸುವ  ಪ್ರಕ್ರಿಯೆಗಳ  ವಿಧಗಳು

ಕಾರ್ಯಚರಣೆ  ಮತ್ತು  ನಿರ್ವಹಣೆ  ನಡೆಸುವ  ವಿಭಾಗ

 

1.

ಕೆ&ಸಿ ವ್ಯಾಲಿ

150

ಬಿ.ನಾಗಸಂದ್ರ

ದ್ವಿತೀಯ

ದ್ವಿತೀಯ- ಅಕ್ಟಿವೇಟೆಡ್‌ ಸ್ಲಡ್ಜ್‌ ಪರೋಸಸ್

ಕಾನಿಅ(ಎಸ್.ಟಿ.ಪಿ) ಚಲ್ಲಘಟ್ಟ ಕಣಿವೆ

ಕೆ&ಸಿ  ವ್ಯಾಲಿ

2.

ಹೆಬ್ಬಾಳ

100

ನಾಗವರ  ಕೆರೆ

ದ್ವಿತೀಯ

ಸೇಕ್ಟೆನ್ಸಿಂಗ್‌ ಬ್ಯಾಚ್‌ ರಿಯಾಕ್ಟರ್

ಕಾನಿಅ(ಎಸ್.ಟಿ.ಪಿ) ಹೆಬ್ಬಾಳ ಕಣಿವೆ

ಹೆಬ್ಬಾಳ

3.

ದೊಡ್ಡಬೆಲೆ

40

ದೊಡ್ಡಬೆಲೆ

ದ್ವಿತೀಯ

ಸೇಕ್ಟೆನ್ಸಿಂಗ್‌ ಬ್ಯಾಚ್‌ ರಿಯಾಕ್ಟರ್

ಕಾನಿಅ(ಎಸ್.ಟಿ.ಪಿ) ವೃಷಭಾವತಿ ಕಣೆವೆ

ವೃಷಭಾವತಿ

4.

ವಿ.ವ್ಯಾಲಿ

150

ಮೈಸೂರ್‌  ರೋಡ್

ದ್ವಿತೀಯ

ಅಕ್ಟಿವೇಟೆಡ್‌ ಸ್ಲಡ್ಜ್‌ ಪರೋಸಸ್

ಕಾನಿಅ(ಎಸ್.ಟಿ.ಪಿ) ವೃಷಭಾವತಿ ಕಣೆವೆ

ವೃಷಭಾವತಿ

5.

ಹುಲಿಮಾವು

10

ಹುಲಿಮಾವು  ಕೆರೆ

ದ್ವಿತೀಯ

ಸೇಕ್ಟೆನ್ಸಿಂಗ್‌ ಬ್ಯಾಚ್‌ ರಿಯಾಕ್ಟರ್

ಕಾನಿಅ(ಎಸ್.ಟಿ.ಪಿ) ಕೋರಮಂಗಲ ಕಣಿವೆ

ಕೆ&ಸಿ  ವ್ಯಾಲಿ

6.

ಚಿಕ್ಕಬೇಗೂರು

5

ಚಿಕ್ಕಬೇಗೂರು  ಕೆರೆ  ಹತ್ತಿರ

ದ್ವಿತೀಯ

ಸೇಕ್ಟೆನ್ಸಿಂಗ್‌ ಬ್ಯಾಚ್‌ ರಿಯಾಕ್ಟರ್

ಕಾನಿಅ(ಎಸ್.ಟಿ.ಪಿ) ಕೋರಮಂಗಲ ಕಣಿವೆ

ಕೆ&ಸಿ  ವ್ಯಾಲಿ

7.

ಸಾರಕ್ಕಿ

5

ಸಾರಕ್ಕಿ  ಕೆರೆ

ದ್ವಿತೀಯ

ಸೇಕ್ಟೆನ್ಸಿಂಗ್‌ ಬ್ಯಾಚ್‌ ರಿಯಾಕ್ಟರ್

ಕಾನಿಅ(ಎಸ್.ಟಿ.ಪಿ) ಕೋರಮಂಗಲ ಕಣಿವೆ

ಕೆ&ಸಿ  ವ್ಯಾಲಿ

8.

ಅಗರಂ

35

ಅಗರ ರಿಂಗ್‌  ರೋಡ್‌

ದ್ವಿತೀಯ

ಸೇಕ್ಟೆನ್ಸಿಂಗ್‌  ಬ್ಯಾಚ್‌ ರಿಯಾಕ್ಟರ್

ಕಾನಿಅ(ಎಸ್.ಟಿ.ಪಿ) ಕೋರಮಂಗಲ ಕಣಿವೆ

ಕೆ&ಸಿ  ವ್ಯಾಲಿ

9.

ಕೆ.ಆರ್‌ ಪುರಂ

20

ತಂಬುಚೆಟ್ಟಿ  ಪಾಲ್ಯ  ರೋಡ್‌

ದ್ವಿತೀಯ

ಸೇಕ್ಟೆನ್ಸಿಂಗ್‌  ಬ್ಯಾಚ್‌ ರಿಯಾಕ್ಟರ್

ಕಾನಿಅ (ಎಸ್.ಟಿ.ಪಿ) ಚಲ್ಲಘಟ್ಟ  ಕಣಿವೆ

ಹೆಬ್ಬಾಳ

10.

ಹೆಣ್ನೂರು

1

ಹೆಣ್ನೂರು  ಕೆರೆ

ದ್ವಿತೀಯ

ಮಣ್ಣಿನ  ಜೈವಿಕ  ತಂತ್ರಜ್ಞಾನ

ಕಾನಿಅ (ಎಸ್.ಟಿ.ಪಿ) ಹೆಬ್ಬಾಳ  ಕಣಿವೆ

ಹೆಬ್ಬಾಳ

11.

ಮಡಿವಾಳ

4

ಮಡಿವಾಳ  ಕೆರೆ

ದ್ವಿತೀಯ

ಸೇಕ್ಟೆನ್ಸಿಂಗ್‌  ಬ್ಯಾಚ್‌  ರಿಯಾಕ್ಟರ್

ಕಾನಿಅ(ಎಸ್.ಟಿ.ಪಿ) ಕೋರಮಂಗಲ ಕಣಿವೆ

ಕೆ &ಸಿ  ವ್ಯಾಲಿ

 

ಒಟ್ಟು 

520

 

 

 

 

 

 

KSPCB  ನೆರವಿನ  ಅಡಿಯಲ್ಲಿ  ಪ್ರಸ್ತಾವಿತ  ಕೆಲಸಗಳು

1

ಕಗ್ಗದಾಸಪುರ

5

ಕಗ್ಗದಾಸಪುರ   ಕೆರೆ

ದ್ವಿತೀಯ

ಸೇಕ್ಟೆನ್ಸಿಂಗ್‌  ಬ್ಯಾಚ್‌ ರಿಯಾಕ್ಟರ್

ಕಾನಿಅ(ಎಸ್.ಟಿ.ಪಿ) ಕೋರಮಂಗಲ  ಕಣಿವೆ

ಕೆ &ಸಿ  ವ್ಯಾಲಿ

2

ಪುಟ್ಟೇನಹಳ್ಳಿ

7

ಪುಟ್ಟೇನಹಳ್ಳಿ   ಕೆರೆ

ದ್ವಿತೀಯ

ಸೇಕ್ಟೆನ್ಸಿಂಗ್‌  ಬ್ಯಾಚ್‌ ರಿಯಾಕ್ಟರ್

ಕಾನಿಅ(ಎಸ್.ಟಿ.ಪಿ) ಹೆಬ್ಬಾಳ  ಕಣಿವೆ

ಹೆಬ್ಬಾಳ

 

  ಒಟ್ಟು

12

         

 

 

ಚಾಲ್ತಿಯಲ್ಲಿರುವ ನೀರು ಸರಬರಾಜು ಯೋಜನೆಗಳು:

 

 1. ಜಲ ಸಂಸ್ಕರಣ ಘಟಕಗಳು

 

ತೊರೆಕಾಡನ ಹಳ್ಳಿಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಹಳೆಯ 1 ಮತ್ತು 11 ನೇ ಘಟ್ಟದ ನೀರು ಸಂಸ್ಕರಣ ಘಟಕಗಳ ಬದಲಿಗೆ 300 ಎಂ.ಎಲ್.ಡಿ  ಸಾಮರ್ಥ್ಯದ ಜಲಸಂಸ್ಕರಣ ಘಟಕದ ನಿರ್ಮಾಣ ಮಾಡಲಾಗಿದೆ. 300 ಎಂ.ಎಲ್.ಡಿ ಗಳಷ್ಟು ನೀರನ್ನು ಸಂಸ್ಕರಿಸ ಬಲ್ಲ ಈ ಸಂಪೂರ್ಣ ಸ್ವಯಂ ಚಾಲಿತ ಘಟಕವನ್ನು148 ಕೋಟಿ ರೂಗಳಲ್ಲಿ ನಿರ್ಮಿಸಲಾಗಿದೆ.

 

 

2. ಬೃಹತ್ ಬೆಂಗಳೂರು ನೀರು ಸರಬರಾಜು- ಒಳಚರಂಡಿ ಯೋಜನೆ

 

ಈ ಮೊದಲಿದ್ದ 8 ನಗರಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಈ ಯೋಜನೆಗೆ ಕರ್ನಾಟಕ ಸರ್ಕಾರವು 2003ರಲ್ಲಿ ಅನುಮೋದನೆ ನೀಡಿತ್ತು.  ಈ ಯೋಜನೆಯಡಿ ಮೊದಲಿನ 8 ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ, 256 ಚ.ಕಿಮೀ ವಿಸ್ತಾರದ ಪ್ರದೇಶದಲ್ಲಿ ವಾಸವಿದ್ದ 27 ಲಕ್ಷಕ್ಕೂ ಅಧಿಕ ಜನಸಂಖ್ಯೆಗೆ – 500 ಕೋಟಿರೂಗಳ ವೆಚ್ಚದಲ್ಲಿ ನೀರು ಸರಬರಾಜು ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. ಈಗಿನ ನೀರು ವಿತರಣಾ ವ್ಯವಸ್ಥೆಯು 100 ರಿಂದ 150 ಮಿಲಿಮೀಟರ್ ವ್ಯಾಸದ 2713 ಕಿಮೀ ಉದ್ದದ ನೀರಿನ ಪೈಪುಗಳ ಮೂಲಕ ನೀರು ಪೂರೈಸುತ್ತಿದೆ. ಯೋಜನೆಯ ಫೀಡರ್  ಮೇನ್ ಗಳ ಉದ್ದ -195  ಕಿ.ಮೀ  ಕೊಳವೆಗಳ ವ್ಯಾಸ – 200 ರಿಂದ 450 ಮಿಲಿಮೀಟರ್, ಯೋಜನೆಯಲ್ಲಿ ಬಳಸಲಾಗಿರುವ ಟ್ರಂಕ್ ಮೇನ್ ಗಳ ಉದ್ದ 85 ಕಿ.ಮೀ ಮತ್ತು ಈ ಪೈಪ್ ಗಳ ವ್ಯಾಸ 600 ರಿಂದ 1300 ಮಿಲಿಮೀಟರ್ ಈ ಯೋಜನೆಯಿಂದ ನೀರು ಸಂಪರ್ಕ ಪಡೆದ ಮನೆಗಳ ಸಂಖ್ಯೆ 1.35 ಲಕ್ಷಕ್ಕಿಂತ ಅಧಿಕ.  ಈ ಯೋಜನೆಯನ್ನು 2012 ರಲ್ಲಿ ಪೂರ್ಣಗೊಳಿಸಲಾಗಿದೆ.

 

 

 3. ನೀರು ಪೂರೈಕೆ ವ್ಯವಸ್ಥೆಯ ಉತ್ತಮಿಕರಣ

 

ನೀರಿನ ಲೆಕ್ಕವನ್ನು ಸರಿಯಾಗಿ ಗಣಿಸಲು ಅನುಕೂಲ ಮಾಡಿಕೊಡಲು, ನೀರಿನ ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮ ಪಡಿಸಲು, ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣವನ್ನು ಕುಗ್ಗಿಸಲು ಮತ್ತು ನೀರು ಪೋಲಾಗುವುದನ್ನು ತಪ್ಪಿಸುವ ಹಲವಾರು ಉದ್ದೇಶಗಳಿಂದ, ಬೆಂಗಳೂರು ವಿಸ್ತಾರದ ಅರ್ಧದಷ್ಟನ್ನು ದೃಷ್ಟಿಯಲ್ಲಿಟ್ಟುಕೊಂಡು 3 ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಯಿತು.  ನೀರಿನ ಒಟ್ಟಾರೆ ಪೋಲಿನ ಪ್ರಮಾಣವನ್ನು ಶೇ. 16 ಕ್ಕೆ ಕುಗ್ಗಿಸುವ ಪ್ರಮುಖ ಆಶಯವೂ ಈ ಯೋಜನೆಗಳದಾಗಿತ್ತು.  655 ಕೋಟಿರೂಗಳ ವೆಚ್ಚದ ಈ ಯೋಜನೆಯಲ್ಲಿ 3.00 ಲಕ್ಷ ಸಂಪರ್ಕ ಕೊಳಾಯಿಗಳನ್ನು ಗಮನಿಸ ಬೇಕಿತ್ತು.  3525 ಕಿ.ಮೀ. ಉದ್ದದ ಪೈಪ್ ಲೈನುಗಳ ಕಡೆ ಗಮನ ಹರಿಸಬೇಗಿತ್ತು.  ಈ ಯೋಜನೆಯಿಂದಾದ ಪ್ರಮುಖ ಲಾಭಗಳೆಂದರೆ, ನೀರು ಪೂರೈಕೆ ಅವಧಿಯ ವಿಸ್ತರಣೆ, ನೀರಿನ ಒತ್ತಡದಲ್ಲಿ ಹೆಚ್ಚಳ, ನೀರಿನ ಗುಣಮಟ್ಟದಲ್ಲಿ ಹೆಚ್ಚಳ ಗ್ರಾಹಕರ ದೂರುಗಳಿಗೆ ಕಡಿವಾಣ, ಸಂಪೂರ್ಣ ಉತ್ತರ ದಾಯಿತ್ಯದ ಸಾಧನೆ ಮತ್ತು ಮುಖ್ಯವಾಗಿ ಜಲಮಂಡಳಿಯ ಆದಾಯದಲ್ಲಿ ಹೆಚ್ಚಳ ಇವುಗಳು.

 

 4. ನೀರು ಪೋಲು ಪತ್ತೆ

 

  • ಆಧುನಿಕವಾದ ಜಪಾನಿನ ತಾಂತ್ರಿಕತೆ ಬಳಸಿಕೊಂಡು ನೀರು ಪೋಲಾಗುವುದನ್ನು ಪತ್ತೆ ಹಚ್ಚುವುದು ಮತ್ತು ಪೋಲು ಪತ್ತೆ ಮತ್ತು ನಿರ್ವಹಣೆಯನ್ನು ಸಾಧಿಸುವುದು.
  • ಇದಕ್ಕಾಗಿ ಎಂ.ಆರ್.ಐ ತಂತ್ರಜ್ಞಾನ ಮತ್ತು JCA ಜೆಸಿಎ ಯಿಂದ ಆರ್ಥಿಕ ನೆರವು
  • ಜಪಾನ್ ನಿಂದ ಉಚಿತವಾಗಿ ಅಗತ್ಯ ಉಪಕರಣಗಳ ಪೂರೈಕೆ
  • ಸ್ವಿಡೊ (SWIDO) ಟೆಕ್ನಿಕಲ್ ಸರ್ವಿಸಸ್ ಸಂಸ್ಥೆಯಿಂದ L-ಸೈನ್ ಲಿಕೇಜ್ ಪತ್ತೆ ಮತ್ತು ನಿರ್ವಹಣಾ ವ್ಯವಸ್ಥೆಯ ಪೂರೈಕೆ
  • ಕಳೆದೊಂದು ವರ್ಷದಿಂದ ಯೋಜನೆ ಕಾರ್ಯಗತ ಗೊಳ್ಳುತ್ತಿರುವುದು
  • ನಾಲ್ಕು ಉಪವಿಭಾಗಗಳಲ್ಲಿ ಹೀಲಿಯಂ ಅನಿಲ ಆಧಾರಿತ ಗುಪ್ತವಾದ ನೀರು ಪೋಲು ಪ್ರಕರಣಗಳ ಪತ್ತೆ, 25 ಕೋಟಿ ರೂ. ವೆಚ್ಚದಲ್ಲಿ.
  • ನೀರು ಪೋಲಾಗುವುದನ್ನು ನಿಖರವಾಗಿ ಪತ್ತೆ ಹಚ್ಚ ಬಹುದಾದುದರಿಂದ ಈ ಯೋಜನೆಯ ಫಲಿತಾಂಶಗಳು ತುಂಬ ಉತ್ತೇಜನಕಾರಿಯಾಗಿವೆ.

 

5.  ಕೆ.ಎಂ.ಆರ್.ಪಿ- ಅಂತರ್ಗತ ಒಳಚರಂಡಿ ವ್ಯವಸ್ಥೆಗಳು -8 ನಗರ ಸ್ಥಳೀಯ ಸಂಸ್ಥೆಗಳಿಗೆ

 

ಬೆಂಗಳೂರು ನಗರ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡ 8 ನಗರ ಸ್ಥಳೀಯ ಸಂಸ್ಥೆಗಳ ಪ್ರದೇಶಕ್ಕೆ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾರ್ಯವನ್ನು ವಿಶ್ವ ಬ್ಯಾಂಕ್ ನೆರವಿನ ಕೆ.ಎಂ.ಆರ್.ಪಿ ಮತ್ತು ಜೆನ್ ನರ್ಮ್ (JNNURM) ನಡಿ ದೊರೆತ ಆರ್ಥಿಕ ನಿಧಿಯ ಸಹಾಯದಿಂದ ಕೈಗೆತ್ತಿಕೊಳ್ಳಲಾಯಿತು. ರೂ.1192 ಕೊಟಿ ಗಳ ಈ ಯೋಜನೆಯನ್ನು 2010 ರಲ್ಲಿ ಪ್ರಾರಂಭಿಸಲಾಯಿತು. ಒಳಚರಂಡಿ ವ್ಯವಸ್ಥೆಯಲ್ಲಿ 2000 ಕಿಮೀ ಉದ್ದದ ಲ್ಯಾಟರಲ್ ಜಾಲ ಮತ್ತು 300 ಕಿ.ಮೀ ಉದ್ದದ ಮುಖ್ಯ-ಉಪಮುಖ್ಯ ಒಳಚರಂಡಿ ಮಾರ್ಗಗಳನ್ನು ನಿರ್ಮಿಸಲಾಯಿತು. ಈ ವೆಚ್ಚದಲ್ಲಿ ರಸ್ತೆಯನ್ನು ಅಗೆಯುವ ಮತ್ತು ಮರಳಿ ಸುಸ್ಥಿತಿಗೆ ತರುವ ವಿಭಾಗವೂ ಸೇರಿ ಕೊಂಡಿತ್ತು.  24 ಪ್ಯಾಕೇಜುಗಳಲ್ಲಿ ಈ ಕೆಲಸವನ್ನು ಮುಗಿಸಲಾಯಿತು.

 

 6. ಕೊಳಚೆ ಪ್ರದೇಶಾಭಿವೃದ್ಧಿ ಭಾಗ

 

ಕೊಳಚೆ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾರ್ಯವನ್ನು ಜಪಾನ್ ಬ್ಯಾಂಕ್ ನ ನೆರವಿನೊಂದಿಗೆ ಕೈಗೆತ್ತಿಕೊಳ್ಳಲಾಯಿತು.   ಈ ಯೋಜನೆಯಡಿ ಮೊದಲಿಗೆ 362 ಕೊಳಚೆ ಪ್ರದೇಶಗಳನ್ನು ಗುರ್ತಿಸಲಾಯಿತು.  9 ಕೋಟಿ ರೂಗಳ ವೆಚ್ಚದಲ್ಲಿ ಯೋಜನೆಯನ್ನು ಕಾರ್ಯಗತಗೊಳಸಲಾಯಿತು.  ವೈಯಕ್ತಿಕ ಗೃಹ ಸಂಪರ್ಕಗಳು ಮತ್ತು HDPE ಪೈಪ್ ಗಳೊಂದಿಗೆ ಒಳಚರಂಡಿ ಸಂಪರ್ಕಗಳನ್ನು ಕಲ್ಪಿಸಲಾಯಿತು.  ಯೋಜನೆಯು ಸಂಪೂರ್ಣವಾಗಿ, ಯಶಸ್ವಿಯಾಗಿ ಅನುಷ್ಠಾನಗೊಂಡಿದೆ.

 

 7. ಒಳಚರಂಡಿ ಕಾಮಗಾರಿಗಳು

 

ಕಾವೇರಿ ನೀರು ಸರಬರಾಜು ಯೋಜನೆಯ IV ನೇ ಘಟ್ಟದ 11 ನೇ ಹಂತದ ಯೋಜನೆಯಡಿ 11 ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ವಿವಿದೆಡೆ 7 ಗುತ್ತಿಗೆ ಪ್ಯಾಕೇಟುಗಳಲ್ಲಿ 339 ಎಂ.ಎಲ್.ಡಿ ನೀರು ಸಂಸ್ಕರಿಸಲೆಂದು ಸ್ಥಾಪಿಸಲಾಯಿತು. ಅಂತೆಯೇ ಈಗ ಇದ್ದ ೊಳಚರಂಡಿ ಪೈಪುಗಳನ್ನು ಬದಲಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. ಇದನ್ನು 10 ಪ್ಯಾಕೇಜುಗಳಲ್ಲಿ 45 ಕಿ.ಮೀ ಉದ್ದದ ಪೈಪ್ ಅಳವಡಿಸುವ ಮೂಲಕ ಸಾಧಿಸಲಾಯಿತು. ಸಾರಕ್ಕಿಯಲ್ಲಿ 20 ಎಂ.ಎಲ್.ಡಿ ಸಾಮರ್ಥ್ಯದ ಹಾಗೂ ಅಗರಂನಲ್ಲಿ 120 ಎಂ.ಎಲ್.ಡಿ ಸಾಮರ್ಥ್ಯದ ಎರಡು ಸಂಸ್ಕರಣಾ ಘಟಕಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕೋರಮಂಗಲ-ಚಳ್ಳಘಟ್ಟ ಕಣಿವೆಯ 60 ಎಂ.ಎಲ್.ಡಿ ಸಾಮಥ್ಯದ ಸಂಸ್ಕರಣಾ ಘಟಕ ಸ್ಥಾಪನೆಯಾಗಿದೆ.

 

ಹೆಬ್ಬಾಳ ಸಂಸ್ಕರಣ ಘಟಕ

 

ಈ ಯೋಜನೆಯಲ್ಲಿ 18 ಕಿ.ಮೀ ಉದ್ದದ ಒಳಚರಂಡಿ ಪೈಪುಗಳನ್ನು 45 ಕೋಟಿ ರೂ. ವೆಚ್ಚದಲ್ಲಿ  ಬದಲಾಯಿಸಲಾಯಿತು.  ಇದರಿಂದಾಗಿ ಹೆಬ್ಬಾಳ ಮತ್ತು ನಾಗವಾರ ಕೆರೆಗಳಿಗೆ ಕೊಳಚೆ ನೀರು ಹರಿಯುವುದನ್ನು ನಿಲ್ಲಿಸಲಾಯಿತು.  ಸಂಪೂರ್ಣವಾಗಿ ಉಪಯುಕ್ತವಾಗಿರುವ ಹೆಬ್ಬಾಳ ಘಟಕದಿಂದ ಹರಿಯುವ  ನೀರಿನ ಪ್ರಮಾಣ 40 ಎಂ.ಎಲ್.ಡಿಗಳು.

 

ಪರಿಸರ ಕ್ರಿಯಾ ಯೋಜನೆ70 ಕಿ.ಮೀ. ಉದ್ದದ ಟ್ರಂಕ್ ಒಳಚರಂಡಿ ಪೈಪ್ ಗಳನ್ನು 176 ಕೋಟಿ ರೂಗಳ ವೆಚ್ಚದಲ್ಲಿ ಬದಲಾಯಿಸುವ ಯೋಜನೆಯಿದು. ಈ ಯೋಜನೆಯ ಮುಕ್ತಾಯದಿಂದ ನೀರು ಸಂಗ್ರಹಣಾ  ಘಟಕಗಳಿಗೆ 150 ಎಂ.ಎಲ್.ಡಿ ಯಷ್ಟು  ಕೊಳಚೆ ನೀರನ್ನು ತಂದು ಸಂಸ್ಕರಿಸಲಾಗುವುದು. ಯೋಜನೆಯ ಪುನರ್ವಿಮರ್ಶಿತ ವೆಚ್ಚ 495 ಕೋಟಿ ರೂ. ಗಳು.  

 

ಪ್ರಸ್ತಾವಿತ ನೀರು ಸರಬರಾಜು ಯೋಜನೆಗಳು.

ಕಳೆದೆರಡು ದಶಕಗಳಿಂದ ಅನೂಹ್ಯ ರೀತಯಲ್ಲಿ ಬೆಂಗಳೂರು ಬೆಳೆಯುತ್ತಿದೆ. ಈ ಬೆಳವಣಿಗೆ, ಕೈಗಾರಿಕೆ ವಾಣಿಜ್ಯ ಹಾಗೂ ಸಾಂಸ್ಥಿಕ ಕ್ಷೇತ್ರದಲ್ಲಿ ಕೂಡ ವ್ಯಾಪಿಸಿದೆ. ಈ ಬೆಳವಣಿಗೆಯಿಂದ ಬೆಂಗಳೂರು ನಗರದ ಹೊರವಲಯ ಯೋಜಿತವಲ್ಲದ ರೀತಿಯಲ್ಲಿ ಬೆಳೆದಿದೆ. ಜನಸಂಖ್ಯೆ ಹೆಚ್ಚಳವಾಗಿದೆ. ನಿರ್ಮಾಣ ಕಾಮಗಾರಿಗಳು ದುಪ್ಪಟ್ಟಾಗಿವೆ. ಜನಗಣತಿಯ ಪ್ರಕಾರ 1991 ರಲ್ಲಿ 4.08 ಮಿಲಿಯನ್ ನಷ್ಟಿದ್ದ ಬೆಂಗಳೂರಿನ ಜನಸಂಖ್ಯೆ - 2001 ರಲ್ಲಿ 5.8 ಮಿಲಿಯನ್ ಇದ್ದು 2011 ರಲ್ಲಿ 8.5 ಮಿಲಿಯನ್ ಗೆ ಏರಿಕೆಯಾಗಿದೆ. ಈ ವೇಗವಾದ ಬೆಳವಣಿಗೆ ಮೂಲಭೂತ ಸೌಕರ್ಯ ವಲಯಕ್ಕೆ ವಿಶೇಷವಾಗಿ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯ ಮೇಲೆ ಅಗಾಧವಾದ ಒತ್ತಡವನ್ನೂ ಹಾಕುತ್ತ ಸಾಗಿದೆ.

 

ಈ ಕೆಳಗಿನ ಪಟ್ಟಿಯಲ್ಲಿ ಬೆಂಗಳೂರು ನಗರದ ಜನಸಂಖ್ಯಾವೃದ್ಧಿ ಮತ್ತು ನೀರು ಪೂರೈಕೆ ಅಂದಾಜನ್ನು ನೀಡಲಾಗಿದೆ.

 

ವರ್ಷ

ಜನಸಂಖ್ಯೆ (ಮಿಲಿಯನ್)

ನೀರಿನ ಬೇಡಿಕೆ (MLD)

ನೀರಿನ ಬೇಡಿಕೆ (TMC)

ಪ್ರಸ್ತುತ ಪೂರೈಕೆ

ಬೇಡಿಕೆಯಲ್ಲಿ ಕೊರತೆ

MLD

TMC

MLD

TMC

2011

8.499

1400

18.05

950

12.25

450

5.80

2021

10.581

2100

27.1

1450

26.7

650

0.4

2031

14.296

2900

37.39

2070

26.7

1450

10.69

2041

17.085

3400

43.84

2070

26.7

1950

17.14

2051

20.561

4100

52.86

2070

26.7

2650

26.16

 

 

        ಬೆಂಗಳೂರು ಕೇಂದ್ರಪ್ರದೇಶ ಮತ್ತು ಹೊಸದಾಗಿ ಸೇರಿಸಲ್ಪಟ್ಟ 8 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಪ್ರದೇಶದಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಇರುವುದಾದರೂ. ಹೊಸದಾಗಿ ಸೇರಿಸಲ್ಪಟ್ಟ 110 ಹಳ್ಳಿಗಳಲ್ಲಿ ಈ ವ್ಯವಸ್ಥೆ ಅಸ್ಥಿತ್ವದಲ್ಲಿ  ಸಾಮಾನ್ಯವಾಗಿ ಈ 110 ಹಳ್ಳಿಗಳಿಗೆ ನೀರು ಪೂರೈಕೆ ಕೊಳವೆ ಬಾವಿಗಳ ಮೂಲಕವೇ ಆಗುತ್ತಿದೆ. ಈಗ ಹೆಚ್ಚುತ್ತಿರುವ ಬೇಡಿಕೆ ನಂಬಲರ್ಹವಾದ ಮತ್ತು ವ್ಯವಸ್ಥೆತವಾದ ನೀರು ಪೂರೈಕೆ ವ್ಯವಸ್ಥೆಯನ್ನು ಕಂಡುಕೊಳ್ಳಬೇಕಾದ  ಸ್ಥಿತಿಯನ್ನು ಮುಂದಿಟ್ಟದೆ. ಈ 110 ಹಳ್ಳಿಗಳಲ್ಲಿ ಯಾವುದೇ ಯೋಜಿತ ಅಂತರ್ಗತ ಒಳಚರಂಡಿ ವ್ಯವಸ್ಥೆಗಳಿಲ್ಲ. ಇರುವ ವ್ಯವಸ್ಥೆಯೆಂದರೆ ಮನೆಗಳಲ್ಲಿನ ಸೆಪ್ಟಿಕ್ ಟ್ಯಾಂಕ್ ಗಳು ಮತ್ತು ಹೀರು ಗುಂಡಿಗಳಷ್ಟೆ. ಕೊಳಚೆಯನ್ನು ಸಂಗ್ರಹಿಸುವ ಸಂಸ್ಕರಿಸುವ ಯಾವುದೇ ವ್ಯವಸ್ಥೆಯಿಲ್ಲ. ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ೀ ಈ ಪ್ರದೇಶಗಳಲ್ಲಿ ಉತ್ಪತ್ತಿಯಾದ ಕೊಳಚೆಯನ್ನು ತೆರೆದ ಚರಂಡಿ ಕಾಲುವೆಗಳ ಮೂಲಕ ಹತ್ತಿರದ ಕಾಲುವೆಗಳಿಗೋ, ಕೆರೆಗಳಿಗೋ ಅಥವಾ ಇತರ ನೀರಿನ ಮೂಲಗಳಿಗೊ ಹರಿಯ ಬಿಡಲಾಗುತ್ತಿತ್ತು.  ಇದರಿಂದ ಪರಿಸರದ ಮೇಲಾಗುವ ಪರಿಣಾಮ ತುಂಬ ವ್ಯತಿರಿಕ್ತವಾದದ್ದು.

        2017ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರೂಪುಗೊಂಡಮೇಲೆ.  ಈ ಹಳ್ಳಿಗಳಲ್ಲಿ ಅಭಿವೃದ್ಧಿ ಪರ್ವ ಕಾಣತೊಡಗಿದೆ.  ಈ ಕ್ಷಿಪ್ರ ಬೆಳವಣಿಗೆ ನೀರು ಸರಬರಾಜು, ಒಳಚರಂಡಿ, ರಸ್ತೆಗಳು ಮೊದಲಾದ ನಗರ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಯನ್ನೂ ಬೇಡುತ್ತದೆ.  ಬೆಂಗಳೂರು ನಗರ ಮತ್ತು ವಿಸ್ತೃತವಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರದೇಶಕ್ಕೆ ನೀರು ಸರಬರಾಜು ಮಾಡುವ ಅಂತರ್ಗತ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಗುರುತರ ಜವಾಬ್ದಾರಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮೇಲಿದೆ.

ಘಟಕಕ್ಕೆ 810 ಎಂ.ಎಲ್.ಡಿ ಯಷ್ಟು ಕಚ್ಛಾನೀರು ಹರಿಸಿ, ಕನಿಷ್ಠ 500 ಎಂ.ಎಲ್.ಡಿಯಷ್ಪು ನೀರು ಪಡೆಯುವುದು.   ನೀರಿನ ಕಚ್ಛಾ ಕಾಲುವೆಗಳು, ಏರೇಷನ್ ಮತ್ತು ಎಲ್ಲ ಕಟ್ಟಡಗಳನ್ನು ನಿರ್ಮಿಸುವುದು, ತೊರೆಕಾಡನಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಗಳಲ್ಲಿ ನೀರು ಪಂಪ್ ಮಾಡುವ ಸ್ಟೇಷನ್ ಗಳನ್ನು ನಿರ್ಮಿಸುವ ಎಲ್ಲ ಯಾಂತ್ರಿಕ ಮತ್ತು ವಿದ್ಯುದೀಕರಣ ವ್ಯವಸ್ಥೆಕಲ್ಪಿಸುವುದು ಮತ್ತು ನಗರಕ್ಕೆ ನೀರು ಪ್ರವೇಶಿಸುವ ವಾಜರ ಹಳ್ಳಿಯಲ್ಲಿ 755 ಎಂ.ಎಲ್.ಡಿ ನೀರಿನ ಶುದ್ಧೀಕರಣ ಮಾಡುವುದು ಹಾಗೂ ನಗರದ ಜಲಾಗಾರಗಳಿಗೆ ಸಂಗ್ರಹಣೆಗೆ ನೀರು ಸಾಗಿಸುವುದು ಈ ಎಲ್ಲಾ ಕೆಲಸಗಳನ್ನು ಪ್ರಸ್ತಾಪಿಸಲಾಗಿದೆ.

  

110 ಹಳ್ಳಿಗಳಿಗೆ ನೀರು ಸರಬರಾಜು ಮತ್ತು ಒಳಚರಂಡಿ ಸೌಲಭ್ಯ

 

ಬೃಹತ್ ಬೆಂಗಳೂರು ಮಹಾನಗರಪಾಲಿಕೆಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಹಾಗೂ ಒಳಚರಂಡಿ  ವ್ಯವಸ್ಥೆ ಕಲ್ಪಿಸಲು ಯೋಜಿಸಲಾಗಿದೆ.  ಈ ಯೋಜನೆಯ ವಿಸ್ತಾರ 225 ಚ.ಕಿ.ಮೀ ಗಳು.  ದಾಸರಹಳ್ಳಿ, ಆರ್.ಆರ್.ನಗರ, ಬೊಮ್ಮನಹಳ್ಳಿ, ಮಹದೇವಪುರ ಮತ್ತು ಬ್ಯಾಟರಾಯನಪುರ ಈ ಐದೂ ವಲಯಗಳಿಗೆ ವಿವರ ಯೋಜನಾವರದಿ (DPR)  ಸಿದ್ಧಪಡಿಸಲಾಗಿದೆ.  ಸಿಪಿಹೆಚ್ ಇಇಒ ಅವರ ಮಾರ್ಗದರ್ಶಿ ಸೂತ್ರದಂತೆ 2034 ರಲ್ಲಿನ ಜನಸಂಖ್ಯಾ ಬೆಳವಣಿಗೆ ಮತ್ತು 2049 ರಲ್ಲಿನ ಜನಸಂಖ್ಯಾ ಬೆಳವಣಿಗೆಯನ್ನು ಅಂದಾಜು ಮಾಡಿ (2011ರ ಜನಗಣತಿ ಆಧಾರದ ಮೇಲೆ) ವರದಿ ಸಿದ್ಧಪಡಿಸಲಾಗಿದೆ.  ಈ ಐದೂ ವಲಯಗಳ ಯೋಜನಾ ವೆಚ್ಚ 5018.38 ಕೋಟಿ ರೂಗಳೆಂದು ಅಂದಾಜು ಮಾಡಲಾಗಿದೆ.  (ಅಂದಾಜು 2014-15 ರಲ್ಲಿನಂತೆ ಜಲಮಂಡಳಿ, ಕರ್ನಾಟಕ ನೀರು ಸರಬರಾಜು ಒಳಚರಂಡಿ ಮಂಡಳಿ, ಲೋಕೋಪಯೋಗಿ ಇಲಾಖೆ ಇವುಗಳಲ್ಲಿನ ದರಪಟ್ಟಿಯ ಆಧಾರದಮೇಲೆ) ವಿವರವಾದ ಯೋಜನಾ ವರದಿ (DPR) ನಲ್ಲಿ ನೀರು ಸರಬರಾಜು ಭಾಗವು, ವಿತರಣಾ ಮತ್ತು ಫೀಡರ್ ಕೊಳವೆಗಳ ವೆಚ್ಚ(110 ಮಿ.ಮೀ. ನಿಂದ 600 ಮಿಲಿಮೀಟರ್ ವ್ಯಾಸದ) ನೆಲದಾಳದ ಸಂಡ್ ಗಳ ಮತ್ತು ಪಂಪ್ ಹೌಸ್ ಗಳ ನಿರ್ಮಾಣ, 1.50 ಲಕ್ಷ ಲೀ. ನಿಂದ 25 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಗಳ ನಿರ್ಮಾಣ, ಅಗತ್ಯವಿರುವೆಡೆ ನೆಲಮಟ್ಟದ ಜಲಾಗಾರಗಳ ನಿರ್ಮಾಣವೂ ಸೇರಿದಂತೆ, ಸೂಪರ್ ವೈಸರಿ ಕಂಟ್ರೋಲ್ ಅಂಡ್ ಡೇಟಾ) ಅಕ್ವಿಸಿಷನ್ ನಂತಹ (SCADA) ನಿಯಂತ್ರಣಾ ವ್ಯವಸ್ಥೆಯ ನಿರ್ಮಾಣ ಮೊತ್ತ ಒಳಗೊಂಡಿರುವ ಒಳಚರಂಡಿ ಭಾಗವು ಲ್ಯಾಟರಲ್ ಕೊಳವೆಗಳು (200 ರಿಂದ 250 ಮಿಮೀ ವ್ಯಾಸ) ಗ್ಲೇಜ್ಡ್ ಸ್ಯೋನ್ ವೇರ್, ಪೈಪುಗಳು ಮತ್ತು ಕೊಳವೆಗಳು, ಮುಖ್ಯವಾದ ಮತ್ತು ಉಪಚರಂಡಿಗಳು, ಕೊಳಚೆ ಪಂಪಿಂಗ್ ಸ್ಟೇಶನುಗಳ ನಿರ್ಮಾಣ ವೆಚ್ಚವನ್ನು ಒಳಗೊಂಡಿದೆ. 

ಯೋಜನೆಯ ಆಂಶಿಕ ಅನುಷ್ಥಾನದ ಕಾರ್ಯ ಪ್ರಾರಂಭವಾಗಿದೆ.  ಯೋಜನೆಯ ವೆಚ್ಚದಲ್ಲಿ ಶೇ. 16 ರಷ್ಟನ್ನು ಕಡಿಮೆ ಮಾಡುವ ಆಲೋಚನೆಯೂ ಇದೆ.  ಈ ಹಂತದಲ್ಲಿ ಸುಮಾರು 1.60 ಲಕ್ಷ ಕೊಳಾಯಿ ಸಂಪರ್ಕಗಳನ್ನು ಗಮನಿಸಲಾಗುತ್ತದೆ/ ಖದಲಿಸಲಾಗುತ್ತದೆ.  1220 ಕಿ.ಮೀ ಪೈಪುಗಳನ್ನು ಅಳವಡಿಸಲಾಗುತ್ತದೆ.  ಯೋಜನೆಯ ವೆಚ್ಚ 821 ಕೋಟಿರೂಗಳು.

 

ಪ್ರಸ್ತಾವಿತ ಒಳಚರಂಡಿ ಕಾಮಗಾರಿಗಳು:

       ಕೊಳಚೆಯನ್ನು ಸಾಗಿಸಲು ಪರಿಸರ ಕ್ರಿಯಾ ಯೋಜನೆ-C ಯನ್ನು ಯೋಜಿಸಲಾಗಿದೆ.  300 ಕಿ.ಮೀ. ಉದ್ದದ ಕೊಳಚೆ ಪೈಪುಗಳಲ್ಲಿ ಉಳಿದ 74 ಕಿ.ಮೀ. ಉದ್ದದ ಪೈಪ್ ನಲ್ಲಿ ಕೊಳಚೆ ಸಾಗಣೆಗಾಗಿ ಈ ಯೋಜನೆ ರೂಪಿಸಲಗಿದೆ.  ಇಲ್ಲಿ ಉದ್ಧವಿಸುವ ಎಲ್ಲಸಮಸ್ಯೆಗಳನ್ನೂ ಎದುರಿಸಲು ಅನುವಾಗುವಂತೆ ವಿವರವಾದ ಯೋಜನಾವರದಿ (ಡಿಪಿಆರ್) ತಯಾರಿಸಲು ಉದ್ದೇಶಿಸಲಾಗಿದೆ.  ಈ ವರದಿ ತಯಾರಿಸಲು 6 ತಿಂಗಳ ಕಾಲಾವಕಾಶ ಬೇಕಿದ್ದು ಯೋಜನೆಯ ವೆಚ್ಚ ಅಂದಾಜು 500 ಕೋಟಿರೂ. ಗಳಾಗಬಹುದು.  ಕೊಳಚೆ ಶುದ್ಧೀಕರಣ ಘಟಕಗಳಿಗೆ ಹರಿದು ಬರುವ ಕೊಳಚೆ ನೀರಿನ ಪ್ರಮಾಣ 120 ಎಂ.ಎಲ್.ಡಿ ಎಂದು ಅಂದಾಜಿಸಲಾಗಿದೆ.

        ಉತ್ಪನ್ನವಾಗುವ ಹೆಚ್ಚುವರಿ ಕೊಳಚೆ ನೀರನ್ನು ಶುದ್ಧೀಕರಿಸಲು ಒಟ್ಟಾರೆ 520 ಎಂ.ಎಲ್.ಡಿ ಸಾಮರ್ಥ್ಯದ 6 ಶುದ್ಧೀಕರಣ ಘಟಕಗಳನ್ನು ನಿರ್ಮಿಸಲು ಪ್ರಾಸ್ತಾವನೆ ಸಲ್ಲಿಸಲಾಗಿದೆ.  ಈ ಘಟಕಗಳ ನಿರ್ಮಾಣ ಕುರಿತ ವಿವರ ಯೋಜನಾ ವರದಿ (ಡಿ.ಪಿ.ಆರ್) ಸಿದ್ಧವಾಗಿದೆ.  ಕೆಯುಐಡಿಎಫ್ ಸಿ ಸಂಸ್ಥೆಯು ಯೋಜನಾವೆಚ್ಚದ ಶೇ. 50 ರಷ್ಟನ್ನು ನೀಡಲು ಅನುಮತಿಸಿದೆ.  ಶೇ. 25ರಷ್ಟು  ವೆಚ್ಚಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.  ಉಳಿದ ಶೇ. 25 ರಷ್ಟು ವೆಚ್ಚವನ್ನು ಮಂಡಳಿಯು ಭರಿಸಲಿದೆ.  ಸಿದ್ಧಪಡಿಸಿದ ಡಿ.ಪಿ.ಆರ್ ಗಳ ಪ್ರಕಾರ ಈ ಯೋಜನೆಯ ಒಟ್ಟುವೆಚ್ಚ 1373.42 ಕೋಟಿರೂಗಳು.  ಘಟಕಗಳ ವಿವರ ಈ ರೀತಿಯಿದೆ.

  • ವೃಷಭಾವತಿ ಕಣಿವೆಯಲ್ಲಿ 150 ಎಂ.ಎಲ್.ಡಿ ಸಾಮರ್ಥ್ಯದ ಶುದ್ಧೀಕರಣ ಘಟಕ
  • ಹೆಬ್ಬಾಳದಲ್ಲಿ 100 ಎಂ.ಎಲ್.ಡಿ ಸಾಮರ್ಥ್ಯದ ಘಟಕ
  • ಕೆ.ಆರ್ ಪುರಂನಲ್ಲಿ 20 ಎಂ.ಎಲ್.ಡಿ ಸಾಮರ್ಥ್ಯದ ಶುದ್ಧೀಕರಣ ಘಟಕ
  • ಕೋರಮಂಗಲ ಚಳ್ಳಘಟ್ಟ ಕಣಿವೆಯಲ್ಲಿ ಎಂ.ಎಲ್.ಡಿ ಸಾಮರ್ಥ್ಯದ ಘಟಕ
  • ದೊಡ್ಡಬೆಲೆಯಲ್ಲಿ 40 ಎಂ.ಎಲ್.ಡಿ ಸಾಮರ್ಥ್ಯದ ಶುದ್ಧೀಕರಣ ಘಟಕ
  • ಬೆಂಗಳೂರು ವಿಶ್ವವಿದ್ಯಾನಿಲಯ ಪ್ರದೇಶದಲ್ಲಿ 60 ಎಂ.ಎಲ್.ಡಿ ಸಾಮರ್ಥ್ಯದ ಘಟಕ

 

ಬೆಳ್ಳಂದೂರು ಮತ್ತು ವರ್ತೂರು ಕೆರೆಗಳು ಮಲಿನ ಗೊಳ್ಳುವುದನ್ನು ತಡೆಯಲು ಈ ಕೆರೆಗಳ ಒಳ ಹರಿವಿನ ಜಾಗಗಳಲ್ಲಿ ಶುದ್ದೀಕರಣ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.  ಈ ಘಟಕಗಳನ್ನು ಹುಳಿಮಾವು, ಬೇಗೂರು, ಸಾರಕ್ಕಿ ಮತ್ತು ಅಗರಗಳಲ್ಲಿ ನಿರ್ಮಿಸಲಾಗುವುದು.  ಇದಕ್ಕೆ ಬೇಕಿರುವ ಭೂಮಿಯನ್ನು ಜಲಮಂಡಳಿಗೆ ಹಸ್ತಾಂತರಗೊಳಿಸಲು ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿಸಲ್ಲಿಸಲಾಗಿದೆ.  ಈ ಘಟಕಗಳನ್ನು ನಿರ್ಮಿಸಿ ನಿರ್ವಹಿಸಲು 585 ಕೋಟಿರೂಗಳ ಅವಶ್ಯಕತೆಯಿದೆ.

 

ಮಳೆನೀರು ಕೊಯ್ಲುಕೆರೆಗಳ ಪುನರುತ್ಥಾನ

ಯಾವುದೇ ಪ್ರದೇಶದ ಜಲಚಕ್ರದಲ್ಲಿ ಮಳೆ ನೀರು ಮತ್ತು ಅಂತರ್ಜಲ ಪ್ರಮುಖ ಅಂಶಗಳು.  1250 ಚದರ ಕಿ.ಮೀ. ವ್ಯಾಪ್ತಿಯ ಬೃಹತ್ ಬೆಂಗಳೂರು ಪ್ರದೇಶದಲ್ಲಿ ವಾರ್ಷಿಕ ಬೀಳುವ ಸರಾಸರಿ 750 ಮಿ.ಮೀ ಮಳೆಯಿಂದಾಗಿ ನಮಗೆ 33 ಟಿ.ಎಂ.ಸಿ ಯಷ್ಟು ನೀರು ದೊರೆಯುತ್ತದೆ. ಬಿ.ಬಿ.ಎಂ.ಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಯು ಪೂರ್ಣಗೊಳಿಸಿರುವ ಸುಧಾರಿತ ಮಳೆನೀರು ಕಾಲುವೆಗಳ ಮೂಲಕ ಬೆಂಗಳೂರು ಮತ್ತು ಸುತ್ತಮುತ್ತ ಬೀಳುವ ಮಳೆನೀರಿನಲ್ಲಿ 5 ರಿಂದ 10 ಟಿ.ಎಂ.ಸಿ ಯಷ್ಟು ನೀರನ್ನು ಜಲಮಂಡಳಿಯು ಉಪಯೋಗಿಸಿ ಕೊಳ್ಳಬಹುದು.  ಈ ಜಾಲದಿಂದ ಎಲ್ಲ ಕೊಳಚೆ ನೀರೂ ಒಟ್ಟಾಗಿ ಕೊಳಚೆ ನೀರು ಸಂಗ್ರಹ – ಸಾಗಣೆ ಜಾಲದಲ್ಲಿ ಹರಿಯುವಂತಾಗಿ ಶುದ್ಧೀಕರಣ ಘಟಕಗಳಿಗೆ ಪೂರ್ಣ ನೀರು ಲಭಿಸುತ್ತದೆ.  ಮಳೆ ನೀರು ಕಾಲುವೆಗಳ ಮೂಲಕ ಸಂಗ್ರಹವಾದ ನೀರು ಕೆರೆಗಳಲ್ಲಿ ಶೇಖರಗೊಂಡು ಕುಸಿದು ಹೋಗಿರುವ ಅಂತರ್ಜಲ ಮಟ್ಟದ ಮರುಪೂರಣಕ್ಕೆ ಸಹಾಯವಾಗಬಲ್ಲದು.  ಜಲ ಶುದ್ಧೀಕರಣ ಘಟಕಗಳಲ್ಲಿ ಶುದ್ದಿಗೊಂಡ ನೀರಿನ ಶೇ. 30ರಷ್ಟು ನೀರನ್ನು ಮಳೆ ನೀರಿನೊಂದಿಗೆ ಬೆರೆತು ಕೊಳ್ಳಲು ಅನುವಾಗುವಂತೆ ಕೆರೆಗಳಿಗೆ ಬಿಡಲಾಗುವುದು.  ಈ ಕೆರೆಗಳಿಂದ ನೆಲದಲ್ಲಿ ಇಂಗಿಕೊಳ್ಳುವ ನೀರು ಭೂಮಿಯಲ್ಲಿನ ಶಾಶ್ವತ ನೀರಿನ ಸೆಲೆಯ ಮೇಲ್ಪದರ ಹಾಗೂ ನೀರಿನ ಮಟ್ಟದ ಕೆಳಗಿರುವ ಚಿಲುಮೆಗಳಲ್ಲಿ ನೀರು ಮರು ಪೂರಣವಾಗುವಂತೆ ಮಾಡತ್ತದೆ.

 

 ನಾಳಿನ ದಿನಗಳ ಸವಾಲುಗಳು ಮತ್ತು ಅವುಗಳ ಕುರಿತ ದೃಷ್ಟಿಕೋನ

       ಮಂಡಳಿಯ ಎದುರು ಇರುವ ಸವಾಲುಗಳು ಮತ್ತು ಅವುಗಳ ಕುರಿತ ದೃಷ್ಟಿಕೋನ ಹೇಗಿವೆ.

  • ಅವಲಂಬಿಸಬಹುದಾದ ಸಂಪನ್ಮೂಲಗಳ ಲಭ್ಯತೆ
  • ನೀರಿನ ಗುಣಮಟ್ಟ ಮತ್ತು ಪ್ರಮಾಣವನ್ನು ಸ್ಥಿರವಾಗಿರಿಸಿಕೊಳ್ಳುವುದು.
  • ತ್ಯಾಜ್ಯ ನೀರಿನ ಸಮರ್ಥ ಸಂಗ್ರಹ – ಸಾಗಣೆ – ಸುರಕ್ಷಿತ ಸಂಶ್ಲೇಷಣೆ.
  • ವಿವಿಧ ಉದ್ದೇಶಗಳಿಗಾಗಿ ನೀರಿನ ಮರುಬಳಕೆ – ಇದಕ್ಕಾಗಿ ರೂಪಿಸಿಬೇಕಾದ ವಿಧಾನ – ಕಾರ್ಯ ತಂತ್ರಗಳು
  • ನೀರು ಸಂಬಂಧಿಸಿದಂತೆ ಉಂಟಾಗಬಹುದಾದ ನೈಸರ್ಗಿಕ ವಿಕೋಪಗಳು.

ಈ ಮೇಲಿನ ಸವಾಲುಗಳನ್ನು ಎದುರಿಸಲು ಮಂಡಳಿಯು ಈ ಕೆಳಕಂಡ ರೀತಿಯ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ.

  • ನೀರಿನ ಬೇಡಿಕೆಯ ಸಮರ್ಥ ನಿರ್ವಹಣೆ
  • ನೀರು ನಷ್ಟವನ್ನು ಕಡಿಮೆ ಮಾಡುವ ಕ್ರಮಗಳು

 ಮೇಲಿನ ಸವಾಲುಗಳಲ್ಲದೆ, ಮಂಡಳಿಯ ಈ ಕೊಡಲೇ ಎದುರಿಸಬೇಕಾದ ಸಮಸ್ಯೆಗಳು ಹೀಗಿವೆ.

  • ನೀರು/ತ್ಯಾಜ್ಯ ನೀರು ಸಾಗಿಸುವ ಮೂಲಭೂತ ಸೌಲಭ್ಯಗಳು.
  • ನೀರಿನ ನಿಜ ಮೌಲ್ಯದತ್ತ ಸಾರ್ವಜನಿಕರಿಗಿರುವ ಅಜ್ಞಾನ ನಿವಾರಣೆ.
  • ಬೃಹತ್ ಯೋಜನೆಗಳಿಗೆ ಬಂಡವಾಳ ಹೂಡಿಕೆ
  • ನೀರಿನ ಕೊರತೆ/ ಪೂರೈಕೆ
  • ನಿವೃತ್ತರಾಗುತ್ತಿರುವ ಸಿಬ್ಬಂದಿಯ ಸ್ಥಳದಲ್ಲಿ ಮರುನೇಮಕ
  • ಸಮುದಾಯ/ಗ್ರಾಹಕರೊಂದಿಗೆ ಒಳ್ಳೆಯ ಸಂಬಂಧ ಸಂವಹನ
  • ಸೇವೆ/ಬಂಡವಾಳ ಹೂಡಿಕೆಯ ಮೇಲಾಗುತ್ತಿರುವ ವೆಚ್ಚವನ್ನು ಮರಳಿ ಪಡೆಯುವುದು.
  • ಸರ್ಕಾರದ ಕಾನೂನುಗಳು
  • ತುರ್ತು ಪರಿಸ್ಥಿತಿಗಳಿಗಾಗಿ ತಯಾರಿ ಮತ್ತು ಪ್ರತಿಕ್ರಿಯೆ.
  • ಶಕ್ತಿಯ (ವಿದ್ಯೂತ್ ಶಕ್ತಿ – ಇತರ ಇಂಧನ)ಗಳ ಬಳಕೆ/ ಅವುಗಳ ವೆಚ್ಚ.
  • ವಾತಾವರಣದಲ್ಲಿನ ಬದಲಾವಣೆಗಳು
  • ಸೇವೆಗಳ ಸುರಕ್ಷತೆ.

 

 

2050 ರವರೆಗಿನ ದೃಷ್ಟಿಕೋನ

ಭವಿಷ್ಯದ ದಿನಗಳಲ್ಲಿ ಎದಿರಾಗುವ ಸವಾಲುಗಳನ್ನು ಮೆಟ್ಟಿ ಮುನ್ನಡೆದು ನಾಳಿನ ದಾರಿಯನ್ನು ಸುಗಮಗೊಳಿಸಲು, ಮಂಡಳಿಯು ಮಾಸ್ಟರ್ ಪ್ಲಾನ್ ಅನ್ನು ಸಿದ್ಧಪಡಿಸಿದೆ. 

ಈ ಅಧ್ಯಯನದಿಂದ ಪ್ರಸ್ತುತ ಇರುವ ಮತ್ತು ಮುಂದೆ ಲಭ್ಯವಾಗಬಹುದಾದ ಜಲಸಂಪನ್ಮೂಲಗಳ ಸಂಪೂರ್ಣ ಚಿತ್ರಣ ಮತ್ತು ವಿಶ್ಲೇಷಣೆ ಸಾಧ್ಯವಾಗುತ್ತದೆ.  ನೀರಿನ ಮರುಬಳಕೆ ಮತ್ತು ಪರ್ಯಾಯ ಮೂಲಗಳ ಹೊಳಹು ದೊರೆಯುತ್ತದೆ.  ಈ ಹೊಳಹು ಮುಂದಿನ ಅಭಿವೃದ್ಧಿಗೆ ಪೀಠಿಕೆ ಯಾಗಲಿದೆ.  ಇದರಿಂದಾಗಿ, ಮುಂದಿನ ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆಗಳನ್ನು ನಿಖರವಾಗಿ ಗುರ್ತಿಸಿ ಅವುಗಳನ್ನು ಅನುಷ್ಠಾನಗೊಳಿಸುವ ಮಾರ್ಗ ನಕ್ಷೆಯನ್ನು ಸಿದ್ಧಪಡಿಸಲು ಸಹಾಯವಾಗುತ್ತದೆ. 

ಇದು ಜಲಮಂಡಳಿಗೊಂದು ಮಾರ್ಗದರ್ಶೀ ಕೈಪಿಡಿಯಾಗಲಿದೆ.  ಯೋಜೆನೆಗಳನ್ನು/ ಯೋಜನೆಯನ್ನು ನಿಖರವಾಗಿ ಗುರ್ತಿಸಿ ಬೇಡಿಕೆಯ ಆಧಾರದ ಮೇಲೆ ಅವುಗಳಲ್ಲಿ ಯಾವುದನ್ನು ಅನುಷ್ಠಾನಗೊಳಿಸ ಬಹುದು?  ಅವುಗಳ ಸಾಧ್ಯಾಸಾಧ್ಯತೆಗಳೇನು? ಮತ್ತು ಆದ್ಯತೆ ಯಾವುದು ಎನ್ನೂವುದನ್ನು ಕಂಡುಕೊಳ್ಳಲು ಅನುಕೂಲ ಮಾಡಿಕೊಡಲಿದೆ.  ಸ್ಥೂಲವಾಗಿ ಯೋಜನೆಗಳ ವೆಚ್ಚವನ್ನು ಅಂದಾಜಿಸಲು, ಅವುಗಳ ಅನುಷ್ಠಾನದ ಕಾಲಾವಧಿಯನ್ನು ಗಣಿಸಲು, ಸೂಕ್ತ ಕಾರ್ಯತಂತ್ರ ಬಳಸಲು, ಹಂತ ಹಂತವಾಗಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಇದು ನೆರವು ನೀಡಲಿದೆ.  ಈ ಯೋಜನೆಗಳಿಗೆ ಬೇಕಾಗ ಬಹುದಾದ ವೆಚ್ಚವೇನು?  ಅಲ್ಪಾವಧಿ – ಮಧ್ಯಮಾವದಿ ಮತ್ತು ದೀರ್ಘಕಾಲಾವಧಿಯ ಸಾಲಗಳನ್ನು ಹೇಗೆ ಯಾವ ಮೂಲದಿಂದ ಪಡೆಯಬಹುದು ಎನ್ನುವ ಅಂಶಗಳ ದಿಕ್ಸೂಚಿಯನ್ನೂ ಈ ದೃಷ್ಟಿಕೋನ ದಾಖಲೆ ಒದಗಿಸುತ್ತದೆ.

ಇತ್ತೀಚಿನ ನವೀಕರಣ​ : 05-08-2021 05:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080