ಅಭಿಪ್ರಾಯ / ಸಲಹೆಗಳು

ನಮ್ಮ ಸೇವೆಗಳು

ನಮ್ಮ ಸೇವೆಗಳು

 

ನಗರ ಬಡವರಗಾಗಿ ಸೇವೆಗಳು

ಜಲಮಂಡಳಿ ಪ್ರಯೋಗಗಳು ಮತ್ತು ಭವಿಷ್ಯದ ಯೋಜನೆಗಳು

 

ಜಲಮಂಡಳಿಯ ವ್ಯಾಪ್ತಿಯಲ್ಲಿ ಬರುವ ಬೆಂಗಳೂರಿನಲ್ಲಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಅಧಿಕೃತವಾಗಿ ಘೋಷಿಸಲ್ಪಟ್ಟ 550 ಕೊಳಚೆ ಪ್ರದೇಶದಳಿವೆ. ಇವುಗಳಲ್ಲಿ 362 ಕೊಳಚೆ ಪ್ರದೇಶಗಳು ಕೇಂದ್ರ ಪ್ರದೇಶಗಳಲ್ಲಿವೆ. ದೊಡ್ಡ ನಗರಗಳಲ್ಲಿರುವಂತೆ ಈ ಕೊಳಚೆ ಪ್ರದೇಶಗಳು ನಗರದ ಅಭಿವೃದ್ಧಿ ಹೊಂದಿದ ಪ್ರದೇಶಗಳ ಮಗ್ಗುಲಲ್ಲಿಯೇ ಇವೆ. ಇಂತಹ ಬಹುತೇಕ ಕೊಳಚೆ ಪ್ರದೇಶಗಳಲ್ಲಿ ನೀರು ಸರಬರಾಜು ಮತ್ತು ಪರಿಸರ ಪೂರಕ ಶೌಚ ವ್ಯವಸ್ಥೆಯ ಮೂಲಭೂತ ಸೌಲಭ್ಯಗಳಲ್ಲಿ ಭಾರಿ ಪ್ರಮಾಣದ ಕೊರತೆ ಕಂಡುಬರುತ್ತದೆ. ನಗರಗಳ ಬಡ ಪ್ರದೇಶಗಳಲ್ಲಿನ ಅಸಮರ್ಪಕ ಮತ್ತು ಕ್ಷೀಣವಾದ ಸೇವೆಗಳಿಂದಾಗಿ ಜಲಮಂಡಳಿಯ ಸೇವೆಗಳ ಮೇಲೆ ಅಡ್ಡಪರಿಣಾಮಗಳು ಉಂಟಾಗುತ್ತವೆ. ಇಲ್ಲಿ ಪ್ರಸ್ತುತ ವ್ಯಾಪಕವಾಗಿರುವ ಅನಧಿಕೃತ ಮತ್ತು ಕಾನೂನುಬಾಹಿರ ಕೊಳಾಯಿ ಸಂಪರ್ಕಗಳು ಜಲಮಂಡಳಿಯ ಆದಾಯ ಮೂಲಕ್ಕೆ ಸಂಚಕಾರ ಒಡ್ಡುತ್ತಿವೆ.

 

ವ್ಯವಸ್ಥಿತವಾಗಿ ಸ್ಥಾಪಿತವಾಗಿಲ್ಲದ ನೀರು ಸರಬರಾಜು ಸಂಪರ್ಕಗಳು ಈ ಕಾರಣದಿಂದಲೇ ಅಪಾಯಕ್ಕೊಳಗಾಗಿ, ನೀರು ಸೊರುವಿಕೆಯಂತಹ, ಮತ್ತು ಚರಂಡಿ ನೀರು - ಕುಡಿಯುವ ನೀರಿನೊಂದಿಗೆ ಬೆರೆತು ಹೋಗುವಂತರಹ, ಚರಂಡಿ ನೀರು ಮಳೆನೀರು ಕಾಲುವೆಗಳ ನೀರಿನೊಂದಿಗೇ ಸೇರಿಹೊಗುವಂತಹ, ಕಲುಷಿತ ನೀರು ತೆರೆದ ಸ್ಥಗಳಲ್ಲಿ ಸಂಗ್ರಹಗೊಂಡು ಅನೇಕ ಅಪಾಯಗಳಿಗೆ ಆಹ್ವಾನ ನೀಡುವಂತಹ ಸ್ಥಿತಿಗಳು ನಿರ್ಮಾಣವಾಗಿ ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆ ಉಂಟಾಗುತ್ತದೆ.  ಪರಿಸರ ಮಾಲಿನ್ಯವೂ ಹೆಚ್ಚಾಗುತ್ತದೆ. ಇದರಿಂದಾಗಿ ಜಲಮಂಡಳಿಯ ಕುರಿತಾಗಿರುವ ಸಾರ್ವಜನಿಕ ಅಭಿಪ್ರಾಯ ಕಳಂಕ ಪೂರ್ಣವಾಗಿರುವ ಸಾಧ್ಯತೆಗಳೇ ಹೆಚ್ಚು.

 

ಈ ಸಮಸ್ಯೆಯ ನಿವಾರಣೆಗಾಗಿ ಜಲಮಂಡಳಿ ಆಸ್ಏಡ್ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ 2001-2002 ರ ಅವಧಿಯಲ್ಲಿ ಅನುಷ್ಠಾನಗೊಳಿಸಿತು. ಈ ಯೋಜನೆಯ ಸಮುದಾಯ ಅಭಿವೃದ್ಧಿ ಘಟಕವು ನಗರ ಬಡವರಿಗೆ ಉತ್ತಮ ಸೇವೆಗಳನ್ನು ನೀಡುವ ಅನೇಕ ಆಲೋಚನೆಗಳನ್ನು ಹಮ್ಮಿಕೊಂಡು ಅದರ ಮೇರೆಗೆ ಕಾರ್ಯನಿರ್ವಾಹಿಸಿತು. ಇದಕ್ಕಾಗಿ 3 ಕೊಳಚೆ ಪ್ರದೇಶಗಳನ್ನು ಗುರ್ತಿಸಲಾಯಿತು. ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ "ಸಿಮೆಂಟ್ ಹಟ್ಸ್" "ಸುಧಾಮನಗರ" ಮತ್ತು "ಚಂದ್ರನಗರ" ಕೊಳಚೆ ಪ್ರದೇಶಗಳನ್ನು ಈ ಉದ್ದೇಶಕ್ಕಾಗಿ ಆಯ್ಕೆಮಾಡಲಾಯಿತು.

 

ಈ ಮಾರ್ಗದರ್ಶಿ ಯೋಜನೆಗಳು ನವೀನ ಮತ್ತು ಘಲಪ್ರದವಾದ ಅವಕಾಶಗಳನ್ನು ಬಳಸಿಕೊಂಡು ನಗರ ಬಡವರಿಗೆ ಹೇಗೆ ಉತ್ತಮ ಸೇವೆಗಳನ್ನು ನೀಡಬಹುದು ಮತ್ತು ಇದುವರೆಗೂ ಸೇವೆಗಳನ್ನು ಪಡೆಯಲಾಗದ ಪ್ರದೇಶಗಳು ಮತ್ತು ಬಡಜನರನ್ನು ಹೇಗೆ ತಲುಪಬಹುದು ಎನ್ನುವ ಕುರಿತು ಅನೇಕ ಹೊಳಹುಗಳನ್ನು ಜಲಮಂಡಳಿಗೆ ಒದಗಿಸಿದವು. ಈ ಅನುಭವವನ್ನು ಬಳಸಿಕೊಂಡು ಜಲಮಂಡಳಿಗೆ ಅನುಕೂಲ ಕಲ್ಪಿಸುವುದು ಅದರ ಗ್ರಾಹಕ ಸಮುದಾಯವನ್ನು ಹಿಗ್ಗಿಸುವುದು ಮತ್ತು ಸಂಪನ್ಮೂಲವನ್ನು ಹೆಚ್ಚಿಸಿ ಕೊಳ್ಳಲಿಕ್ಕಾಗಿ ಈ ಮಾರ್ಗದರ್ಶಿ ಯೋಜನೆಗಳನ್ನು ಸರ್ವತ್ರ ಬಳಸಬಹುದು ಮತ್ತು ನಿರೀಕ್ಷಿತ ಖಚಿತ ಯಶ ಪಡೆಯಬಹುದು ಎನ್ನುವ ಅಭಿಪ್ರಯಕ್ಕೆ ಬರಲಾಯಿತು.

 

ಜಲಮಂಡಳಿಯ ಸಾಮಾಜಿಕ ಅಭಿವೃದ್ಧಿ ಘಟಕವು (ಸೋಷಿಯಲ್ ಡೆವಲಪ್ ಮಂಟ್ ಯೂನಿಟ್), ಈ ಮಾರ್ಗದರ್ಶಿ ಯೋಜನೆಯ ಲಾಭವನ್ನು ಮರುಕಳಿಸಲು ಮತ್ತು ಯೋಜನೆಯ ಆಶಯಗಳನ್ನು ಇನ್ನಷ್ಟು ವಿಸ್ತರಿಸಲು ನಿರ್ಧರಿಸಿ ಕಾರ್ಯೋನ್ಮುಖವಾಯಿತು. ಪ್ಯಾಕೇಜ್ ಪ್ರೋಗ್ರಾಮ್ ನಡಿ ಬರುವ ಎಲ್ಲ ಕೊಳಚೆ ಪ್ರದೇಶಗಳಲ್ಲೂ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಸುಸಚ್ಚಿತವಾಗಿ ರೂಪಿಸಲು ಸಜ್ಜಾಯಿತು, ಇಡೀ ನಗರವನ್ನು ತುಂಬ ಸುಸಜ್ಜಿತವಾಗಿ ನೀರು ಸರಬರಾಜು ಮತ್ತು ಒಳಚರಂಡಿ ಜಾಲದೊಂದಿಗೆ ಸುಸಜ್ಜುಗೊಳಿಸಲು ನಿರ್ಧರಿಸಿ ನಗರ ಸಭೆ ಮತ್ತು ಜಲಮಂಡಳಿಯ ಸಹಯೋಗದಲ್ಲಿ ಮೂಲಸೌಲಭ್ಯ ವಿಸ್ತರಣಾ ಕಾರ್ಯಕ್ರಮವನ್ನು 2003-2006ರ ಅವಧಿಯಲ್ಲಿ  ಅನುಷ್ಠಾನಗೊಳಿಸಲಾಯಿತು. ಜಲಮಂಡಳಿಯ ಸಾಮಾಜಿಕ ಅಭಿವೃದ್ಧಿ ಘಟಕವು, ಸರ್ಕಾರೇತರ ಸಂಸ್ಥೆಗಳು, ಮತ್ತಿತರ ಸಾಮಾಜಿಕ ಸಂಘಟನೆಗಳ ಸಹಕಾರದಲ್ಲಿ ಕಾರ್ಯತತ್ಪರವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಿತು.

 

 ವಿವಿಧ ರೀತಿಯ ಕೊಳಗೇರಿಗಳಿಗೆ ನೀಡಲಾದ ಸೇವಾ ಸ್ತರಗಳು.

 

ಜಲಮಂಡಳಿಯ ನೀರು ಸರಬರಾಜು ವ್ಯವಸ್ಥೆಯೊಂದಿಗೆ ಅಧಿಕೃತವಾಗಿ ಸಂಪರ್ಕಕ್ಕೊಳಗಾಗುವಂತೆ ಕೊಳೆಗೇರಿ ನಿವಾಸಿಗಳ ಮನವೊಲಿಸಲಾಯಿತು. ಕಾನೂನು ಬಾಹಿರವಾಗಿ ಜಲಮಂಡಳಿಯ ಸೇವೆಯನ್ನು ಬಳಸಿಕೊಳ್ಳದಿರುವಂತೆ ಅವರನ್ನು ಪರಿವರ್ತಿತಗೊಳಿಸಲಾಯಿತು. ತನ್ನ ನೀರು ಸರಬರಾಜು ಸಂಪರ್ಕ ದರವನ್ನು ಜಲಮಂಡಳಿ ಕಡಿಮೆ ಮಾಡಿತು. 150 ಚದರಡಿಯಷ್ಟಿರುವ ಮನೆ, ವ್ಯವಸ್ಥಿತ ಜಲಸಂಪರ್ಕ ಪಡೆಯಲು ಕೇವಲ ಮೀಟರ್ ದರವಾದ ರೂ. 550 ಗಳಷ್ಟನ್ನೆ ಪಾವತಿ ಮಾಡುವಂತೆ ದರ ನಿಗದಿಮಾಡಿತು. ಅಂತೆಯೇ 151 ರಿಂದ 600 ಚದರಡಿಯಷ್ಟಿರುವ ಮನೆಗೆ ರೂ.800 ಗಳನ್ನು (ಮೀಟರ್ ದರ ರೂ.550+ ರೂ.250 ನೆಲದಡಿಯ ಚರಂಡಿ ಸಂಪರ್ಕ ದರ) ಹಾಗೂ 600 ಚದರಡಿಗಿಂತ ಹೆಚ್ಚಿರುವ ಮನೆಗಳವರು ನಿಯಮಿತ ದರವನ್ನು ಪಾವತಿವಸುವಂತೆ ದರ ನಿಗದಿಗೊಳಿಸಲಾಯಿತು. ಕೊಳೆಗೇರಿ ನಿವಾಸಿಗಳು ಎರಡು ಕಂತುಗಳಲ್ಲಿ ಸಂಪರ್ಕ ದರವನ್ನು ಪಾವತಿಸಲೂ ಅವಕಾಶ ಮಾಡಿಕೊಡಲಾಯಿತು. ಸಂಪರ್ಕ ಪ್ರಕ್ರಿಯೆಯನ್ನು ಸರಳಗೊಳಿಸಲಾಯಿತು. ಕೊಳೆಗೇರಿ ನಿವಾಸಿಗಳು ತಮ್ಮ ವಸತಿ ನಿರೂಪಣೆಗಾಗಿ ಬೆಂಗಳೂರು ಅಭಿವೃದ್ಧಿಪ್ರಾಧಿಕಾರ, ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ, ನಗರಪಾಲಿಕೆಯವರು ನೀಡಿದಂತಹ ಹಕ್ಕು ಪತ್ರಗಳನ್ನು ಅರ್ಜಿಯ ಜೊತೆಗೆ ಸಲ್ಲಿಸಿದರೆ ಸಾಕು ಅಥವಾ ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಇಲ್ಲವೆ ಕೊಳಚೆ ನಿರ್ಮೂಲನಾ ಮಂಡಳಿಯವರು ನೀಡಿದ ಗುರುತಿನ ಪತ್ರಗಳನ್ನು ಸಲ್ಲಿಸಿದರೂ ಸಾಕು.

 

ನಗರ ಬಡವರಿಗಾಗಿ ಉಚಿತ ಸಂಪರ್ಕಗಳು

 

ಬಾಡಿಗೆಗಿರುವ ಮತ್ತು ಸ್ಥಳಾವಕಾಶವಿರುವವರಿಗೆ ವೈಯಕ್ತಿಕ ಗೃಹಸಂಪರ್ಕಗಳು, ವೆಚ್ಚವನ್ನು  ಸಮಭಾಗಿಸಿ ಹಂಚಿಕೊಳ್ಳಬಹುದಾಯ ಸಮುದಾಯ ಮಟ್ಟದ ಮೀಟರ್ ಇರುವ ಸಂಪರ್ಕಗಳು, ಬಾಡಿಗೆಗಿರುವ ಆದರೆ ಸ್ಥಳಾವಕಾಶವಿಲ್ಲದವರಿಗೆ ಸಂಪರ್ಕಗಳು, ಬಾಡಿಗೆಯ ಅನುಕೂಲವಿಲ್ಲದ ಕೊಳೆಗೇರಿ ನಿವಾಸಿಗಳಿಗೂ ಜಲಸಂಪರ್ಕ ಕಲ್ಪಿಸಿ ಕೊಡಲಾಗುತ್ತಿದೆ.

 

ಸಾರ್ವಜನಿಕ ಚಿಲುಮೆಗಳಿಗೆ ಅವಕಾಶ ನಿರ್ಬಂಧಿಸಿದೆ. ಸಾರ್ವಜನಿಕ ಕೊಳಾಯಿಗಳಿಂದ ನೀರು ಸಂಗ್ರಹಿಸುವ ಬವಣೆಗೊಳಗಾಗುತ್ತಿದ್ದ ಬಡವರು ಈಗ ತಮ್ಮ ಮನೆಯಲ್ಲೇ ನೀರು ಬರುವ ವಾತಾವಣ ರೂಪುಗೊಂಡಿರುವುದರಿಂದ ಸಂತಸಗೊಂಡಿದ್ದಾರೆ. ಬಳಕೆಗಾಗಿ ಸ್ವಲ್ಪ ದುಡ್ಡು ಪಾವತಿಸಬೇಕಾದ ಸಂಸ್ಕೃತಿ ಈಗ ಎಲ್ಲೆಡೆ ಒಪ್ಪಿತವಾಗಿತ್ತಿದೆ. 48 ಕೊಳಚೆ ಪ್ರದೇಶಗಳಲ್ಲಿ ಸರ್ಕಾರೇತರ ಸಂಸ್ಥೆಗಳು ಮತ್ತಿತರ ಸಮುದಾಯ ಆಧಾರಿತ ಸಂಘಟನೆಗಳ ಸಹಕಾರದಲ್ಲಿ ಕಾರ್ಯಯೋಜನೆ ಅನುಷ್ಠಾನಗೊಳ್ಳುತ್ತಿದೆ. ಸಾಮಾಜಿಕ ಅಭಿವೃದ್ಧಿ ಘಟಕವು ಕೊಳಗೇರಿ ನಿವಾಸಿಗಳು ಸಾರ್ವಜನಿಕ ಕೊಳಾಯಿಗಳ ಮೇಲೆ ಅವಲಂಬಿತರಾಗುವುದನ್ನು ತಪ್ಪಿಸುವ ಹೊಣೆಗಾರಿಕೆಯನ್ನು ಹೊತ್ತು ಕೊಂಡಿದೆ. ಮೇಲೆ ಹೇಳಿದಂತೆ ಸ್ವಲ್ಪಹಣಪಾವತಿಮಾಡಿ, ವೈಯಕ್ತಿಕವಾಗಿ ಅಥವಾ ಸಹಭಾಗಿತ್ವದಲ್ಲಿ ಅವರು ನೀರು ಪಡೆಯುವಂತೆ ಮಾಡುವಲ್ಲಿ ಅದು ಯಶಸ್ವಿಯಾಗಿದೆ. ಅನೇಕ ಕೊಳೆಗೇರಿಗಳಲ್ಲಿ ಜಲಮಂಡಳಿಯ ನೀರು ಸಂಪರ್ಕ ಕೊಳವೆಗಳಿಂದ ಅನಧಿಕೃತವಾಗಿ ಮತ್ತು ಕಾನೂನುಬಾಹಿರವಾಗಿ ನೀರು ಕೊಳ್ಳುತ್ತಿದ್ದವರೀಗ ಜಲಮಂಡಳಿಯ ಕ್ರಮಗಳಿಂದಾಗಿ ಅಪಾಯಕಾರಿ ಪ್ರವೃತ್ತಿಯಿಂದ ಹೊರಬರುತ್ತಿದ್ದಾರೆ.

 

ಈ ಯೋಜನೆಯ ಯಶಸ್ಸಿನಿಂದಾಗಿ ಕಾವೇರಿ ನೀರು ಸರಬರಾಜು ಯೋಜನೆಗೆ ಆರ್ಥಿಕ ನೆರವು ನೀಡುತ್ತಿರುವ ಜಪಾನ್ ಬ್ಯಾಂಕ್ ಆಫ್ ಇಂಟರ್ ನ್ಯಾಷನಲ್ ಕೋ-ಆಪರೇಷನ್ ಸಂಸ್ಥೆಯು ಕೊಳಚೆ ಪ್ರದೇಶಾಭಿವೃದ್ಧಿಯನ್ನು ಪ್ರತ್ಯೇಕ ಘಟಕವಾಗಿ ಪರಿಗಣಿಸಿದೆ. ಬೆಂಗಳೂರು ನಗರದ ಎಲ್ಲ ಕೊಳಚೆ ಪ್ರದೇಶಗಳನ್ನೂ ಹಂತ ಹಂತವಾಗಿ ಈ ಯೋಜನೆಯ ವ್ಯಾಪ್ತಿಯಡಿಗೆ ತರಲು ಪ್ರಸ್ತಾಪಿಸಲಾಗಿದೆ. ಪ್ರಸ್ತುತ ಕಾರ್ಯಗತವಾಗುತ್ತಿರುವ ಈ ಯೋಜನೆಗಾಗಿ ಮೊದಲ ಹಂತದಲ್ಲಿ 96 ಕೊಳಚೆ ಪ್ರದೇಶಗಳಲ್ಲಿ ಕಾರನಿರ್ವಹಿಸಲು ನಾಲ್ಕು ಸರ್ಕಾರೇತರ ಸಂಸ್ಥೆಗಳನ್ನು ಸಂಪರ್ಕಿಸಲಾಗಿದೆ.

 

ಅನುಬಂಧಸೇವೆಗಳಿಗಾಗಿ ನಾಗರಿಕ ಸನ್ನದು

 

ಕಟ್ಟಡಗಳಿಗೆ ನೀರು ಮತ್ತು ಒಳಚರಂಡಿ ಸಂಪರ್ಕಗಳ ಮಂಜೂರು.

 • ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆಯ ನಿಯಾಮಕ1 ರಂತೆ, ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯ ಸಂಪರ್ಕ ಪಡೆಯಬಯಸುವ ಮಾಲಿಕ, ಬಾಡಿಗೆದಾರ ಅಥವಾ ವಸತಿದಾರರು, ಸಂಪರ್ಕಕ್ಕಾಗಿ ಮಂಡಳಿಯ ಪ್ರದತ್ತ ಇಂಜನಿಯರ್ ಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ನೇರವಾಗಿhttps://www.bwssb.gov.in/ಮುಖಾಂತರ ಇಲ್ಲವೇ ಮಂಡಳಿಯಿಂದ ಲೈಸೆನ್ಸ್ ಪಡೆದ  ಪ್ಲಂಬರ್ಗಳ ಮೂಲಕವಾಗಲೀ ಸಲ್ಲಿಸಬೇಕು.
 • ವಿವಿಧ ಅಧಿಕಾರಿಗಳಿಗೆ ನಿಯುಕ್ತವಾದ ಅಧಿಕಾರದಂತೆ ಈ ಅಧಿಕಾರಿಗಳು ನೀರು ಸರಬರಾಜು ಮತ್ತು ಒಳಚರಂಡಿ ಸಂಪರ್ಕವನ್ನು ನಿಗದಿತ ಶುಲ್ಕ ಮತ್ತು ಇತರ ದರಗಳನ್ನು ಪಡೆದು ಕೊಂಡನಂತರ ಕಲ್ಪಿಸಲು ಅಧಿಕಾರ ಹೊಂದಿರುತ್ತಾರೆ.

 

ಸೇವಾ ಸಂಪರ್ಕದ 3 ವಿಧಗಳು

 • ವಸತಿ/ ವಸತಿ ಹೆಚ್ ಆರ್ (ಹೈಲೈಸ್ ಅಂದರೆ ಮಹಡಿ ಕಟ್ಟಡಗಳು)
 • ವಸತಿಯೇತರ ಕಟ್ಟಡಗಳು.
 • ಆಂಶಿಕ ವಸತಿಯೇತರ ಕಟ್ಟಡಗಳು.

ಪ್ರತಿಯೊಂದು ರೂಪದ ಸಂಪರ್ಕವನ್ನು ಕಲ್ಪಿಸುವ ಕಾಲಾವಧಿಯು ಕರ್ನಾಟಕ ಸಕಾಲ ಸೇವಾ ನಿಯಮಗಳು 2011 ರ ಅಡಿಯಲ್ಲಿ ನಿರ್ದೇಶಿತವಾದಂತೆ ಇರುತ್ತದೆ.

 • ವಸತಿ ಕಟ್ಟಡಗಳಿಗೆ (ಅಪಾರ್ಟ್‌ಮೆಂಟ್‌ಗಳನ್ನು ಹೊರತು ಪಡಿಸಿ) ಹೊಸ/ ಹೆಚ್ಚುವರಿ ಸಂಪರ್ಕ ನೀರು ಸರಬರಾಜು ಮತ್ತು ನೆಲದಡಿಯ ಒಳಚರಂಡಿ ಸಂಪರ್ಕಗಳಿಗೆ ಅನುಮತಿ ನೀಡಲು 14 ದಿನಗಳು.
 • ಬಹು ಮಹಡಿ ಕಟ್ಟಡಗಳಿಗೆ ನೀರು ಸರಬರಾಜು ಮತ್ತು ಒಳಚರಂಡಿ ಸಂಪರ್ಕ (ಹೊಸ/ಹೆಚ್ಚುವರಿ ಎರಡೂ ಸೇರಿದಂತೆ) ಕಲ್ಪಿಸಲು ಅನುಮತಿ ನೀಡಲು 42 ದಿನಗಳು.

 

ಹೊಸ ಸಂಪರ್ಕಕ್ಕಾಗಿ ಅರ್ಜಿಸಲ್ಲಿಸುವ ಸಂದರ್ಭದಲ್ಲಿ ಅರ್ಜಿದಾರರು ಒದಗಿಸಬೇಕಾದ ದಾಖಲೆಗಳು (ನೀರಿನ ಕೊಳವೆಯ ವ್ಯಾಸ ಹೆಚ್ಚಿಸುವುದುಹೆಚ್ಚುವರಿ ಕೊಳಾಯಿಗಳ ಅಳವಡಿಕೆಒಳಚರಂಡಿ ಸ್ಥಳಗಳ ನಿರ್ಧಾರ ಮತ್ತು ಸೇವಾ ಸಂಪರ್ಕಗಳನ್ನು ಬದಲಾಯಿಸಲು)

 

 • ಮಂಜೂರಾದ ಕಟ್ಟಡ ಪ್ಲಾನ್.
 • ತೆರಿಗೆ ಪಾವತಿಸಿದ ರಸೀದಿಗಳು.
 • ಖಾತಾ ಉದ್ದತ ಪ್ರತಿಗಳು/ಮಾರಾಟ ಒಪ್ಪಂದಗಳು/ಖಾತಾ ಪ್ರಮಾಣ ಪತ್ರ ಇತ್ಯಾದಿ.
 • ರಸ್ತೆ ಅಗೆಯಲು ಪರವಾನಗಿ/ರಸೀತಿ.
 • ಕಟ್ಟಡದಲ್ಲಿ ಮಾಡಲಾದ ಮಳೆ ನೀರು ಸಂಗ್ರಹಣೆ ವ್ಯವಸ್ಥೆ.


ಕೆಳಕಂಡ ಮಾದರಿಯ ಕಟ್ಟಡಗಳಿಗೆ, ಒಳಚರಂಡಿ ನೀರು ಸಂಸ್ಕರಣ ಘಟಕ - ವಿವಿದ ಪೈಪಿಂಗ್ ವ್ಯವಸ್ಥೆಯೊಂದಿಗೆ ನಿರ್ವಹಿಸಲು ಕರ್ನಾಟಕ ಮಾಲಿನ್ಯನಿಯಂತ್ರಣ ಮಂಡಳಿ (ಕೆಎಸ್ ಪಿಸಿಬಿ) ನೀಡಿರುವ ಒಪ್ಪಿಗೆ (ಕನ್ಸೆಂಟ್ ಆಫ್ ಆಪರೇಷನ್) ಪತ್ರ ಅವಶ್ಯಕ.

 • 20 ಅಥವಾ ಹೆಚ್ಚು. ವಸತಿ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವ ಕಟ್ಟಡ ಅಥವಾ 2000 ಚ.ಮೀ ಮತ್ತು ಹೆಚ್ಚು ಅಳತೆಯುಳ್ಳ ವಸತಿ ಕಟ್ಟಡಗಳು.
 • 2000 ಚದರ ಮೀಟರ್‌ ಅಥವಾ ಅದಕ್ಕೂ ಹೆಚ್ಚಿನ ಅಳತೆಯ ವಾಣಿಜ್ಯ ಕಟ್ಟಡಗಳು.
 • 5000 ಚದರ ಮೀಟರ್ ಅಥವಾ ಅದಕ್ಕೂ ಹೆಚ್ಚಿನ ಅಳತೆಯ ಶೈಕ್ಷಣಿಕ ಸಂಸ್ಥೆಗಳ ಕಟ್ಟಡಗಳು
 • ವಸತಿ/ಬಹುವಸತಿ/5 -- ಹೆಚ್ಚು ವಸತಿಗಳುಳ್ಳ ಅಪಾರ್ಟ್‌ಮೆಂಟ್‌ಗಳಿಗೆ ವಸತಿ ಪ್ರಮಾಣ(ಆಕ್ಯುಪೆನ್ಸಿ ಸರ್ಟಿಫಿಕೇಟ್) ಅಂತೆಯೇ ಒಟ್ಟಾರೆ 300 ಚ.ಮೀ ಅಥವಾ ಹೆಚ್ಚಿನ ಅಳತೆ ಹೊಂದಿರುವ ವಾಣಿಜ್ಯ ಕಟ್ಟಡಗಳಿಗೂ ಇದು ಅನ್ವಯ.
 • ಈಗಾಗಲೇ ಸಂಪರ್ಕ ಹೊಂದಿರುವ ಪ್ರಕರಣಗಳಲ್ಲಿ ಇತ್ತಿಚಿನ ರಸೀತಿಯೊಂದಿಗೆ ಆರ್‌ಆರ್ ನಂಬರನ್ನು ನಮೂದಿಸಬೇಕು. ನೀರ ಕೊಳವೆಯ ವ್ಯಾಸ ವಿಸ್ತಾರ, ಹೆಚ್ಚುವರಿ ನಳಗಳ ಅಳವಡಿಕೆ ಮತ್ತು ಒಳಚರಂಡಿ ನಿರ್ಗಮನ ಪಾಯಿಂಟ್‌ಗಳ ಹೆಚ್ಚಳಕ್ಕೆ (ನೊ ಡ್ಯೂ) ಬಾಕಿಯಿಲ್ಲದಂತಹ ರಸೀತಿಗಳನ್ನು ಸಲ್ಲಿಸಬೇಕು.

 

ಅರ್ಜಿ ಶುಲ್ಕ ಮತ್ತು ಇತರ ಶುಲ್ಕಗಳು

 • ಅರ್ಜಿ ಫಾರಂ ಶುಲ್ಕ
 • ಅಟ್ಯಾಚ್ ಮೆಂಟ್ ಶುಲ್ಕ
 • 3 ಎಂಎಂಡಿ ಠೇವಣಿ (ಡಿ/ಎನ್ಡಿ/ ಪಿಎನ್‌ಡಿ)
 • ನೀರಿನ ಮೀಟರ್ ವೆಚ್ಚ(ಬೆಲೆ)
 • ನೀರಿನ ಮೀಟರ್ ಅಳವಡಿಸುವ ಮಜೂರಿ
 • ಪ್ರೋರಾಟಾ ದರಗಳು
 • ನಿರೀಕ್ಷಣಾ ಶುಲ್ಕ (ಇನ್ ಸ್ಪೆಕ್ಷನ್)
 • ಒಳಚರಂಡಿ ನಿರ್ಗಮನ ಪಾಯಿಂಟ್‌ಗಳ ವೆಚ್ಚ.
 • ಅನಧಿಕೃತ ಸಂಪರ್ಕಗಳಿಗೆ ದಂಡಶುಲ್ಕ.

 

ಮಾಲಿಕತ್ರಹೆಸರು ಬದಲಾವಣೆ

 • ಸಂಬಂಧಿತ ಉಪವಿಭಾಗಕ್ಕೆ ಹೆಸರು ಬದಲಾವಣೆಗಾಗಿ ನಿಗದಿ ಪಡಿಸಿರುವ ಶುಲ್ಕ ಪಾವತಿಸಿ ಅರ್ಜಿಸಲ್ಲಿಸಬೇಕು.
 • ಖಾತಾ ಸರ್ಟಿಫಿಕೇಟ್ ಬೇಕು.
 • ಕ್ರಯ ಪತ್ರ.
 • ತೆರಿಗೆ ಪಾವತಿಸಿದ ರಸೀತಿ.
 • ಹಳೆಯ ಬಾಕಿ ಇಲ್ಲದಂತೆ ಇತ್ತೀಚೆಗೆ ಪಡೆದುಕೊಳ್ಳಲಾದ ನೀರು ಸರಬರಾಜು ವೆಚ್ಚದ ಬಿಲ್ ಪಾವತಿ ರಸೀತಿ.
 • ಹೆಸರು ಬದಲಾವಣೆಗಾಗಿ ಸಂಬಂಧಿತ ಪ್ರಮಾಣಪತ್ರ (ಅಫಿಡವಿಟ್).
 • ಮಂಜೂರಾತಿಗಾಗಿ ಕಾಲಮಿತಿ- 3 ಕೆಲಸದ ದಿನಗಳು. 

  

ಗುಣಮಟ್ಟ

ಮುಖ್ಯ ಇಂಜಿನೀಯರ್
ಗುಣಮಟ್ಟ ಪ್ರಮಾಣ, ಬೆಂಗಳೂರು ನೀರು ಸರಬರಾಜು ಒಳಚರಂಡಿ ಮಂಡಳಿ.

ಗುಣಮಟ್ಟ ಪ್ರಮಾಣ -ಮುಖ್ಯ ಇಂಜಿನೀಯರ್ ರವರ ಕಛೇರಿಯು ಬೆಂಗಳೂರಿನ ಕಾವೇರಿ ಭವನದ 3 ನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕೇಂದ್ರ ಕಛೇರಿಯಲ್ಲಿ ಕೆಳಕಂಡ ಸಿಬ್ಬಂದಿಯನ್ನು ಹೊಂದಿರುತ್ತದೆ

 

ಮುಖ್ಯ ಅಭಿಯಂತರರು (ಗುಣಮಟ್ಟ ಪ್ರಮಾಣ)
ದೂರವಾಣಿ: 080-22945107

 

ಹೆಚ್ಚುವರಿ ಮುಖ್ಯ ಅಭಿಯಂತರರು (ಗು, ಪ)
ದೂರವಾಣಿ: 080-22945107

 

ತಾಂತ್ರಿಕ ಸಹಾಯಕರು
ದೂರವಾಣಿ: 080-22945107

       

ಮುಖ್ಯ ಅಭಿಯಂತರರು (ಗು.ಪ) ಅವರ ಅಧೀನ ನಿಯಂತ್ರಣದಲ್ಲಿ ಈ ಕೆಳಕಂಡ ವಿಭಾಗಗಳಿದ್ದು ಅವುಗಳ ಕಾರ್ಯನಿರ್ವಹಣೆ  ಈ ರೀತಿಯಿದೆ.

 

ಕಾರ್ಯನಿರ್ವಾಹಕ ಅಭಿಯಂತರರು (ಗು.ಪ್ರ) 22945201 ಕಾರ್ಯನಿರ್ವಾಹಕ ಅಭಿಯಂತರವರ ಕಛೇರಿಯು ಮಲ್ಲೇಶ್ವರಂ ನಲ್ಲಿದೆ. ಕಾರ್ಯನಿರ್ವಾಹಕ ಅಭಿಯಂತರರು (ಗು.ಪ) ತಮ್ಮ ಕಛೇರಿಯಲ್ಲಿ ಕಾರ್ಯನಿರ್ವಹಿಸುವ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರುಗಳ ಜೊತೆಗೂಡಿ ಬೆಂಗಳೂರಿನಲ್ಲಿ ಜಲಮಂಡಳಿಯು ಕೈಗೆತ್ತಿಕೊಳ್ಳುವ ಎಲ್ಲ  ನೀರುಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯ ಎಲ್ಲ ಕಾರ್ಯಗಳ ಗುಣಮಟ್ಟ ಪ್ರಮಾಣದ ಜವಾಬ್ದಾರಿ ಹೊಂದಿರುತ್ತಾರೆ.

 

ಕಾರ್ಯನಿರ್ವಾಹಕ ಅಭಿಯಂತರರ ಉಪಯೋಗಕ್ಕಾಗಿ ಬೆಂಗಳೂರಿನ ಹೈಗೌಂಡ್ ನಲ್ಲಿರುವ ಕೇಂದ್ರ ನೀರು ಪರೀಕ್ಷಾ ಪ್ರಯೋಗಾಲಯ (ಸೆಂಟ್ರಲ್ ವಾಟರ್ ಟೆಸ್ಟಿಂಗ್ ಲ್ಯಾಬೊರೇಟರಿ) ವಿದೆ. ಇಲ್ಲಿ ಬೆಂಗಳೂರಿನ ವಿವಿಧ ಭಾಗಗಳಿಂದ ಕೊಳವೆ ಬಾವಿ ಇತ್ಯಾದಿಗಳಿಂದ ಸಂಗ್ರಹಿಸಿದ ನೀರಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ನೀರಿನ ಸಾಂದ್ರತೆ, ಅದರಲ್ಲಿನ PH ಮೌಲ್ಯಗಳು ಇತ್ಯಾದಿಗಳ ಕುರಿತು ಇಲ್ಲಿ ಪರೀಕ್ಷಿಸಲಾಗುತ್ತದೆ. ಇದರ ಜೊತೆಗೇ ಜಲಮಂಡಳಿಯು ಸಂಚಾರಿ ನೀರು ಪರೀಕ್ಷಾ ಘಟಕಗಳನ್ನೂ ಹೊಂದಿದ್ದು ಅವು ವಿವಿಧ ಸ್ಥಳಗಳಲ್ಲಿ ನೀರು ಸಂಗ್ರಹಿಸಿ ಸ್ಥಳದಲ್ಲಿಯೇ ನೀರಿನ ಮಾದರಿಯನ್ನು ಪರೀಕ್ಷಿಸುತ್ತವೆ.

 

ಕಾರ್ಯನಿರ್ವಾಹಕ ಅಭಿಯಂತರರ(ಕೇಂದ್ರ ಉಗ್ರಾಣದೂ: 22945205

 

ಕಾರ್ಯನಿರ್ವಾಹಕ ಅಭಿಯಂತರರು(ಕೇಂದ್ರ ಉಗ್ರಾಣ) ಇವರ ಕಛೇರಿಯು ಬೆಂಗಳೂರಿನ ಮಲ್ಲೇಶ್ವರಂ ನಲ್ಲಿದ್ದು, ಎಲ್ಲರೀತಿಯ ಸಾಮಗ್ರಿಯನ್ನು ಪಡೆದುಕೊಳ್ಳವ /ಖರೀದಿಸುವ ಕಾರ್ಯವನ್ನು ಕಾರ್ಯನಿರ್ವಾಹಕ ಅಭಿಯಂತರರವರ  ನೇತೃತ್ವದಲ್ಲಿ ನಡೆಸುತ್ತದೆ. ಸಾಮಾಗ್ರಿಗಳ ಪಟ್ಟಿಯಲ್ಲಿ ಕಬ್ಬಿಣ (ಸರಳು ಇತ್ಯಾದಿ) ಸಿಮೆಂಟ್, ಕೊಳವೆಗಳು, ಪೈಪ್ಗಳು, ನೀರಿನ ಮೀಟರ್ಗಳು, ದ್ರವರೂಪಿ ಕ್ಲೋರಿನ್ ಮುಂತಾದ ಬಲಮಂಡಳಿಯು ಕಾರ್ಯನಿರ್ವಹಣೆಗೆ ಆಗತ್ಯವಿರುವ ಎಲ್ಲ ಸಾಮಗ್ರಿಗಳೂ ಸೇರಿರುತ್ತದೆ.

 


ಕಾರ್ಯನಿರ್ವಾಹಕ ಅಭಿಯಂತರರುನೀರಿನ ಸಂಶೋಧನೆ ನಿಯಂತ್ರಣದೂ: 22945116

ಕಾರ್ಯನಿರ್ವಾಹಕ ಅಭಿಯಂತರರು( ನೀರಿನ ಸಂಶೋಧನೆ ನಿಯಂತ್ರಣ) ಇವರ ಕಛೇರಿಯು ಬೆಂಗಳೂರಿನ ಕಾವೇರಿ ಭವನದ 7ನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. 3 ಉಪವಿಭಾಗಗಳನ್ನು ಒಳಗೊಂಡ ಈ ಶಾಖೆ, ನೀರಿನ ಸೋರುವಿಕೆಯನ್ನು ಪತ್ತೆಹಚ್ಚುವುದು ಮತ್ತದನ್ನು ಸರಿಪಡಿಸುವ ಕಾರ್ಯನೋಡಿ ಕೊಳ್ಳುತ್ತದೆ. ಈ ಶಾಖೆಯ ಮುಖ್ಯ ಕಾರ್ಯ, ಲೆಕ್ಕಕ್ಕೆ ಸಿಗದಂತ ನೀರು ಪೋಲಾಗುವುದನ್ನು ಕಂಡುಹಿಡಿಯುವುದೇ ಆಗಿದೆ. ವ್ಯರ್ಥನೀರು ಪೋಲಾಗುವುದನ್ನು ತಡೆಯುವತ್ತ ಹೆಚ್ಚು ಒತ್ತು ನೀಡಲಾಗುತ್ತದೆ. ಮಾಹಿತಿ ತಂತ್ರಜ್ಞಾನ ಚಟುವಟಿಕೆಗಳು ಮತ್ತಿತರ ಕಾಲಮಿತಿಯುಳ್ಳ ಕಾರ್ಯಗಳ ನಿರ್ವಹಣೆಯ ಹೊಣೆಯನ್ನು ಈ ಶಾಖೆಗೆ ವಹಿಸಲಾಗಿದೆ.

 ಈ ಶಾಖೆಯು ಬಹುಮುಖ್ಯವಾಗಿ ಕೆಳಗಿನ ಚಟುವಟಿಕೆಗಳತ್ತ ತನ್ನ ಗಮನ ಕೇಂದ್ರೀಕರಿಸುತ್ತಿದೆ.

 

ನೀರುಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯ ವಿಭಾಗಗಳ ದಾಖಲೆಗಳನ್ನು ಪರಿಶೀಲಿಸುವುದು, ಅಂತೆಯೇ ಉಪವಿಭಾಗ ಮತ್ತು ಸೇವಾಕೇಂದ್ರಗಳಲ್ಲಿನ ದಾಖಲಾತಿವಹಿಗಳ ತಪಾಸಣೆ, ಬಾಕಿಯಿರುವ ಪಾವತಿಯ ವಿವರಗಳನ್ನು ಕಲೆ ಹಾಕುವುದು, ದೋಷಪೂರ್ಣ ಮೀಟರುಗಳ ತಖ್ತೆಪರಿಶೀಲನೆ, ಮಂಜೂರಾತಿ ಕಡತಗಳು, ನೀರು ಸರಬರಾಜು ಒಳಚರಂಡಿ ವ್ಯವಸ್ಥೆ ಕೋರಿ ಬಂದ ಅರ್ಜಿಗಳ ವಹಿಗಳ ತಪಾಸಣೆ, ನೀರು ಸರಬರಾಜು ವ್ಯವಸ್ಥೆಯ ರೂಪಾಂತರ ವಹಿಗಳ ಪರೀಕ್ಷೆ ಮೊದಲಾದ ಕಾರ್ಯಗಳ ಜೊತೆಗೇ ಉಗ್ರಾಣದಲ್ಲಿನ ಸಾಮಗ್ರಿಗಳ ವಿವರ ಪರಿಶೀಲನೆ, ಕ್ಷೇತ್ರದಲ್ಲಿ ಮತ್ತು ಸೇವಾಕೇಂದ್ರಗಳಲ್ಲಿನ  ಸಾಮಗ್ರಿ ಪರಿಶೀಲನೆಯನ್ನು ನಡೆಸುತ್ತದೆ.

 • ನೀರು ತುಂಬುವ ಸ್ಥಳಗಳ ಪರಿಶೀಲನೆ.
 • ಕ್ಷೇತ್ರದಲ್ಲಿ ಮತ್ತು ಸೇವಾಕೇಂದ್ರಗಳಲ್ಲಿನ ಸಾಮಗ್ರಿ ಪರಿಶೀಲನೆ.
 • ಸಾರ್ವಜನಿಕರಿಂದ ಬಂದ ದೂರುಗಳನ್ನು ಸರಿಪಡಿಸುವುದು ಮತ್ತು ಮೇಲಧಿಕಾರಿಗಳಿಂದ ಬಂದ ಸೂಚನೆಗಳನ್ನು ಪಾಲಿಸುವುದು.
 • ಮೇಲಧಿಕಾರಿಗಳಿಂದ ಸೂಚಿತವಾದ ಎಲ್ಲ ತನಿಖೆಗಳನ್ನು ಮಾಡುವುದು.
 • ಜಲಸಂಗ್ರಹಾಗಾರಗಳ, ನೆಲಮಟ್ಟದ ಮತ್ತು ನೆಲದಾಳದ ನೀರಿನ ಸಂಗ್ರಹಾಗಾರಗಳ ವಾಟರ್ ಟ್ಯಾಂಕುಗಳ ಮತ್ತು ನೀರು ಪೂರೈಕೆ ಪೈಪುಗಳ ಪರೀಕ್ಷೆ/ನಿರ್ವಹಣೆ.
 • ಕ್ಲೋರಿನೇಟರುಗಳನ್ನು ಅವುಗಳ ಸಾಮರ್ಥ್ಯಕ್ಕನುಗುಣವಾಗಿ ತಪಾಸಿಸುವುದು.
 • ವಿಭಾಗ-ಉಪವಿಭಾಗಗಳ, ಸೇವಾಕೇಂದ್ರಗಳ ಮತ್ತು ಕೊಳಚೆ ಸಂಸ್ಕರಣ ಘಟಕಗಳ ಕಾಲ ಕಾಲಿಕ ತಪಾಸಣೆ.
 • ಕೇಂದ್ರ ನೀರು ಪರೀಕ್ಷಾ ಪ್ರಯೋಗಾಲಯ, ಮೀಟರ್ ಪರೀಕ್ಷಾ ಮತ್ತು ಸೇವಾಪ್ರಯೋಗಾಲಯಗಳು ಈ ಶಾಖೆಗೆ ಹೊಂದಿಕೊಂಡಿವೆ.

 

 

ಪ್ರಯೋಗಾಲಯದ ಕಾರ್ಯಗಳು

 ಕೇಂದ್ರ ನೀರು ಪರೀಕ್ಷಾ ಪ್ರಯೋಗಾಲಯ ಮತ್ತು ಮೀಟರ್ ಪರೀಕ್ಷಾ ಪ್ರಯೋಗಾಲಯದಲ್ಲಿ ಇಬ್ಬರು ನುರಿತ ರಸಾಯನ ಶಾಸ್ತ್ರಜ್ಞರು ಕೆಲಸ ಮಾಡುತ್ತಾರೆ. ನಗರದಲ್ಲಿರುವ ವಿವಿಧ ಸೇವಾಕೇಂದ್ರಗಳ ಮೂಲಕ ವಿತರಣಾಜಾಲದ ಗ್ರಾಹಕರ ಕೊನೆತುದಿ, ಸಾರ್ವಜನಿಕ ಕೊಳಾಯಿಗಳು, ನೆಲಮಟ್ಟದ ಜಲ ಸಂಗ್ರಹಾಗಾರಗಳು ಮತ್ತು ನೀರಿನ ಟ್ಯಾಂಕ್ ಗಳಿಂದ ಪ್ರತಿ ತಿಂಗಳೂ 16 ಮಾದರಿಗಳಂತೆ ಜಲಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗುತ್ತದೆ.

 

ಇಲ್ಲಿ ಜಲಮಾದರಿಗಳಲ್ಲಿನ ಭೌತಿಕ, ರಸಾಯನಿಕ ಮತ್ತು ಬ್ಯಾಕ್ಟೀರಿಯಾ ಗುಣಗಳ ಕುರಿತು ಪರೀಕ್ಷೆ ಮಾಡಲಾಗುತ್ತದೆ. ಫಲಿತಾಂಶವನ್ನು ಮಾಹಿತಿಗಾಗಿ ಹಾಗೂ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿಕ್ಕಾಗಿ ಸಂಬಂಧಿತ ಸೇವಾಕೇಂದ್ರಗಳು, ನೀರು ಸರಬರಾಜು ವಿಭಾಗಗಳು ಮತ್ತು ಉಪವಿಭಾಗಗಳಿಗೆ ಕಳುಹಿಸಿಕೊಡಲಾಗುತ್ತದೆ.

 

ಬೆಂಗಳೂರಿನ ನಾಗರಿಕರಿಗೆಅತ್ಯುಚ್ಚ ಗುಣಮಟ್ಟದ ನೀರನ್ನು ಪೂರೈಸಲು ಬೆಂಗಳೂರ ಜಲಮಂಡಳಿ ಕಂಕಣ ಬದ್ಧವಾಗಿದೆ

ಭಾರತೀಯ ಮಾಪನ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ (WHO) ಗುಣಮಟ್ಟ ಮಾಪನ ಮಾದರಿಯನ್ನು ಅದು ಸಾಧಿಸಿದೆ.

 

ಸಂಚಾರಿ ಪ್ರಯೋಗಾಲಯ

ವಾಸ್ತವವಾಗಿ ಇದೊಂದು, ಬೇರೆ ಸ್ಥಳಗಳಲ್ಲಿ ಸಂಗ್ರಹಿಸಿದ ನೀರಿನ ಮಾದರಿಗಳ ಪರೀಕ್ಷೆ ಮತ್ತು ವಿಶ್ಲೇಷಣೆಗಾಗಿ ಅಗತ್ಯವಿರುವ ಉಪಕರಣಗಳನ್ನು ಅಳವಡಿಸಿದ ವಾಹನ, ಸಂಗ್ರಹಿಸಿದ ಮಾದರಿಗಳನ್ನು ಅವುಗಳ ಭೌತಿಕ, ರಸಾಯನಿಕ ಮತ್ತು ಬ್ಯಾಕ್ಟೀರಿಯಾ ಗುಣಗಳ ಕುರಿತು ಈ ಸಂಚಾರಿ ಪ್ರಯೋಗಾಲಯದಲ್ಲಿ ಪರೀಕ್ಷೆ-ವಿಶ್ಲೇಷಣೆ  ನಡೆಸಲಾಗುತ್ತದೆ. ನೀರು ಬಳಕೆಗೆ ಅಯೋಗ್ಯವಾಗಿದೆ ಎಂದು ಕಂಡುಬಂದ ತಕ್ಷಣ ದೋಷಗಳನ್ನು ಸರಿಪಡಿಸುವ ಕುರಿತು ಸೂಕ್ತ ಸೂಚನೆಗಳನ್ನು ಸಂಬಂಧಿಸಿದವರಿಗೆ ಕೂಡಲೇ ನೀಡಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಹೀಗೆ ದೋಷಪೂರಿತ ನೀರು ಕಂಡುಬಂದು ಪರಿಹಾರ ಕೈಗೊಂಡಮೇಲೆ ಮತ್ತೆ ಅದೇ ಸ್ಥಳದಲ್ಲಿ ನೀರಿನ ಪರೀಕ್ಷೆ ನಡೆಸಿ, ವಿಶ್ಲೇಷಿಸಿ ನೀರು ಬಳಸಲು ಯೋಗ್ಯ ಎಂದು ಖಚಿತ ಪಡಿಸಿಕೊಳ್ಳಲಾಗುತ್ತದೆ.

 

ವಿತರಣಾ ಜಾಲದಿಂದ ನೀರು ಶೇಖರಿಸಿದ ನಂತರವೂ ಬೆಂಗಳೂರು ಜಲಮಂಡಳಿ ನಿರ್ವಹಿಸುವ ಕೊಳವೆ ಬಾವಿಗಳಿಂದಲೂ ನೀರು ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತದೆ. ನೀರಿನ ನೈಟ್ರೇಟ್ ಸಾಂದ್ರತೆ ಮತ್ತು ಗಡಸುತನದ ಪರೀಕ್ಷೆಯಾಗುತ್ತದೆ. ಕೊಳವೆ ಬಾವಿಯ ನೀರು ಬಳಸಲು ಅಯೋಗ್ಯ ಎಂದು ಕಂಡು ಬಂದರೆ ಸಂಬಂಧಿತ ಸೇವಾಕ್ಷೇತ್ರದವರು ಆ ಬೋರ್‌ವೆಲ್ (ಕೊಳವೆ ಬಾವಿ)ಯ ಮುಂದೆ "ಈ ನೀರು ಕುಡಿಯಲು ಯೋಗ್ಯವಾಗಿಲ್ಲ" ಎಂಬ ಫಲಕವನ್ನು ಪ್ರದರ್ಶಿಸಬೇಕಾಗುತ್ತದೆ. ಹೀಗೆ ಸಂಗ್ರಹಿಸಿದ ಮಾದರಿಗಳ ವಿವರಗಳನ್ನು "ನೀರಿನ ಗುಣಮಟ್ಟ ವಿಚಕ್ಷಣೆ" ಎಂಬ ಪಟ್ಟಿಯಡಿ ದಾಖಲಿಸಲಾಗುತ್ತದೆ.

 

ಪ್ರಸ್ತುತ ಬೆಂಗಳೂರು ಜಲಮಂಡಳಿಯು 'ಪ್ರೆಸಿಮ್ಯಾಗ್', 'ಕ್ಯಾಪ್ ಸ್ಟನ್' ಮತ್ತು 'ಅಕ್ಷಾರಿಸ್' ಸಂಸ್ಥೆಗಳ ತಯಾರಿಕೆಗಳಾದ ವಾಟರ್ ಮೀಟರುಗಳನ್ನು ಬಳಸುತ್ತಿದೆ.

ಇತ್ತೀಚಿನ ನವೀಕರಣ​ : 28-12-2022 02:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080